ADVERTISEMENT

ಮಿಜೋರಾಂ | ಕೆಟ್ಟ ಆಡಳಿತದಿಂದ ಬೇಸತ್ತ ಜನರು: ಲಾಲ್ದುಹೋಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2023, 2:19 IST
Last Updated 5 ಡಿಸೆಂಬರ್ 2023, 2:19 IST
<div class="paragraphs"><p>ಲಾಲ್ದುಹೋಮಾ</p></div>

ಲಾಲ್ದುಹೋಮಾ

   

(ಪಿಟಿಐ ಚಿತ್ರ)

ನವದೆಹಲಿ: ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದಿರುವ ಜೋರಂ ಪೀಪಲ್ಸ್ ಮೂವ್‌ಮೆಂಟ್‌ (ಝೆಡ್‌ಪಿಎಂ) ಪಕ್ಷ ನೂತನ ಸರ್ಕಾರ ರಚನೆಯ ಹೊಸ್ತಿಲಲ್ಲಿದೆ.

ADVERTISEMENT

ಪಕ್ಷದ ನಾಯಕ ಮಾಜಿ ಐಪಿಎಸ್‌ ಅಧಿಕಾರಿ ಲಾಲ್ದುಹೋಮಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ಜೊತೆ ಮಾತನಾಡಿರುವ ಅವರು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಿದ್ದಾರೆ. ಇಂದಿನ ಯುವ ಜನತೆ, ರಾಜಕೀಯದಿಂದ ಹೊರತಾಗಿದ್ದಾರೆ. ಈ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಹೊಸ ನೀತಿ, ಹೊಸ ಆಲೋಚನೆಗಳನ್ನು ರಾಜ್ಯದ ಜನರು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನರ ಎಲ್ಲ ನಿರೀಕ್ಷೆಗಳನ್ನು ಹಿಂದಿನ ಸರ್ಕಾರವು ಗಾಳಿಗೆ ತೂರಿದೆ. ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆ ಒಪ್ಪಂದ ನೀಡಲಾಗಿದೆ. ಅಂತಹ ಟೆಂಡರ್‌ಗಳ ಮೇಲೆ ನಿರ್ಬಂಧ ಹೇರಲಿದ್ದೇನೆ. ನನ್ನ ಅನುಮಿತಿಯಿಲ್ಲದೆ ಟೆಂಡರ್ ನೀಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆಯೊಂದಿಗೆ ಝೆಡ್‌ಪಿಎಂ ಅಧಿಕಾರಕ್ಕೆ ಬಂದಿದೆ. ಈ ಬಾರಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಮಹಿಳೆಯರಿಂದಾಗಿ ಸರ್ಕಾರ ರಚನೆಗೊಂಡಿದೆ. ಅವರಿಗೆಲ್ಲರಿಗೂ ನಾನು ಕೃತಜ್ಞರಾಗಿದ್ದು, ಸುಧಾರಣೆಗಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ದೇವರು ಮತ್ತು ಮಿಜೋರಾಂ ಜನರ ಆಶೀರ್ವಾದ ನಮ್ಮೊಂದಿಗೆ ಇದೆ. ಇಷ್ಟು ದೊಡ್ಡ ಜಯವನ್ನು ನಿರೀಕ್ಷೆ ಮಾಡಿದ್ದೆವು. ಕಳೆದ ವರ್ಷವೇ ಜನರು ನಮ್ಮನ್ನು ಆರಿಸಿದ್ದರು. ಹೊಸ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲೇ ಪ್ರಮುಖ ಅಂಶಗಳ ಕುರಿತು ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.