ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಕುಟುಂಬದಿಂದ ದೂರವಾಗಿರುವ ಅಣ್ಣ ಎಂ.ಕೆ ಅಳಗಿರಿ ತಮ್ಮ ತಾಯಿ ದಯಾಳು ಅಮ್ಮಾಳ್ ಅವರ 90ನೇ ಹುಟ್ಟುಹಬ್ಬದ ವೇಳೆ ಬಹುಕಾಲದ ನಂತರ ಮುಖಾಮುಖಿಯಾಗಿದ್ದಾರೆ.
ಭಾನುವಾರ ಚೆನ್ನೈನ ಗೋಪಾಲಪುರದಲ್ಲಿರುವ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಸ್ಟಾಲಿನ್ ಮತ್ತು ಅಳಗಿರಿ ಎದುರುಬದರಾದರು. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರು ಇಬ್ಬರನ್ನೂ ಬೆಸೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಸ್ಟಾಲಿನ್ ಅವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದ ಕಾರಣಕ್ಕೆ 2014ರಲ್ಲಿ ಕರುಣಾನಿಧಿ ಅವರು ಅಳಗಿರಿ ಅವರನ್ನು ಪಕ್ಷದಿಂದ ಹೊರದಬ್ಬಿದ್ದರು. ಇದಾದ ಬಳಿಕ ಪಕ್ಷ ಮತ್ತು ಕುಟುಂಬ ಸೇರಿಕೊಳ್ಳಲು ಅಳಗಿರಿ ಹಲವು ಪ್ರಯತ್ನ ಮಾಡಿದ್ದರಾದರೂ ಎಲ್ಲವೂ ವಿಫಲವಾಗಿತ್ತು.
ದಯಾಳು ಅಮ್ಮಾಳ್ ಅವರು ಕರುಣಾನಿಧಿ ಅವರ ಎರಡನೇ ಪತ್ನಿ. ಸ್ಟಾಲಿನ್ ಮತ್ತು ಅಳಗಿರಿ ಇಬ್ಬರೂ ದಯಾಳು ಅವರ ಪುತ್ರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.