ADVERTISEMENT

ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ನಟನೆ: ಸಚಿನ್‌ ನಿವಾಸದ ಎದುರು ಪ್ರತಿಭಟನೆ

ಪಿಟಿಐ
Published 31 ಆಗಸ್ಟ್ 2023, 16:50 IST
Last Updated 31 ಆಗಸ್ಟ್ 2023, 16:50 IST
<div class="paragraphs"><p> ಸಚಿನ್‌ ತೆಂಡೂಲ್ಕರ್‌ </p></div>

ಸಚಿನ್‌ ತೆಂಡೂಲ್ಕರ್‌

   –ಪಿಟಿಐ ಚಿತ್ರ

ಮುಂಬೈ: ಮಾಜಿ ಕ್ರಿಕೆಟಿಗ ‌ ಸಚಿನ್‌ ತೆಂಡೂಲ್ಕರ್‌ ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದನ್ನು ವಿರೋಧಿಸಿ ಅವರ ನಿವಾಸದ ಎದುರು ಪ್ರತಿಭಟನೆ ನಡೆದಿದೆ.

ಬಾಂದ್ರಾದಲ್ಲಿರುವ ಅವರ ನಿವಾಸದ ಎದುರು ಶಾಸಕ ಬಚ್ಚು ಕಡು ಮತ್ತು ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬೆಂಬಲಿಗ ಹಾಗೂ ಪ್ರಹಾರ್‌ ಜನಶಕ್ತಿ ಪಕ್ಷದ ಶಾಸಕರಾಗಿರುವ ಬಚ್ಚು ಮತ್ತು ಇತರ 22 ಮಂದಿ ಮಂದಿಯನ್ನು ಪೊಲೀಸರು ಸಚಿನ್‌ ನಿವಾಸದ ಬಳಿಯಿಂದ ಕರೆದೊಯ್ದರು.

ಪ್ರತಿಭಟನಕಾರರ ವಿರುದ್ಧ ಪ್ರಕಣ ದಾಖಲಾಗಿದೆ.

ಯುವಕರನ್ನು ದಾರಿತಪ್ಪಿಸುತ್ತಿರುವ ಆನ್‌ಲೈನ್‌ ಗೇಮ್‌ ಅನ್ನು ಪ್ರೋತ್ಸಾಹಿಸುತ್ತಿರುವ ಸಚಿನ್‌ ಅವರು ತಮ್ಮ ‘ಭಾರತ ರತ್ನ’ ಪುರಸ್ಕಾರವನ್ನು ವಾಪಸ್‌ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.