ನವದೆಹಲಿ: ‘ಅಮೆರಿಕಕ್ಕೇ ಆದ್ಯತೆ. ಅಮೆರಿಕನ್ನರಿಗೇ ಆದ್ಯತೆ. ಅಮೆರಿಕದ ಕಂಪನಿಗಳು ಅಮೆರಿಕನ್ನರಿಗೇ ಉದ್ಯೋಗ ನೀಡಬೇಕು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿ ರೂಪಿಸಿದರೂ, ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳಿಗೆ (ಎಂಎನ್‌ಸಿ) ಭಾರತೀಯ ಎಂಜಿನಿಯರ್‌ಗಳ ಬಗ್ಗೆಯೇ ಒಲವು ಹೆಚ್ಚು.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎನ್‌ಸಿಗಳಲ್ಲಿ ಅರ್ಧಕ್ಕೂ ಹೆಚ್ಚು ಅಮೆರಿಕದ ಕಂಪನಿಗಳೇ ಆಗಿವೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎನ್‌ಸಿಗಳು ಬೆಂಗಳೂರಿನಲ್ಲೇ ಹೆಚ್ಚು ಕೇಂದ್ರಗಳನ್ನು ಹೊಂದಿವೆ. ಭಾರತದಲ್ಲಿ ಉದ್ಯೋಗ ಸೃಷ್ಟಿ ನಿಧಾನಗತಿಯಲ್ಲಿರುವ ಪರಿಸ್ಥಿತಿಯಲ್ಲೂ ಈ ಎಂಎನ್‌ಸಿಗಳು ಹೆಚ್ಚು ಉದ್ಯೋಗವನ್ನು ಸೃಷ್ಟಿಸಿವೆ ಎಂದು ಝಿನ್ನೋವ್ ಕನ್ಸಂಲ್ಟಿಂಗ್ ಏಜೆನ್ಸಿ ಹೇಳಿದೆ. ಝಿನ್ನೋವ್ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ.
ಭಾರತವೇ ಏಕೆ, ಬೆಂಗಳೂರೇ ಏಕೆ...
* ಈ ಕಂಪನಿಗಳು ಭಾರತದ ಎಂಜಿನಿಯರ್‌ಗಳನ್ನೇ ನೇಮಕ ಮಾಡಿಕೊಳ್ಳುತ್ತವೆ
* ಕಂಪನಿಗಳಿಗೆ ಅಗತ್ಯವಿರುವಷ್ಟು ಸಂಖ್ಯೆ ಮತ್ತು ಉತ್ತಮ ಕೌಶಲವಿರುವ ಎಂಜಿನಿಯರ್‌ಗಳು ಭಾರತದಲ್ಲಿ ಮಾತ್ರ ಲಭ್ಯವಿದ್ದಾರೆ
* ಹೀಗಾಗಿ ಈ ಕಂಪನಿಗಳು ಭಾರತದಲ್ಲೇ ಕೇಂದ್ರಗಳನ್ನು ಆರಂಭಿಸಲು ಒಲವು ತೋರುತ್ತವೆ
* ದೇಶದ ಬೇರೆ ಯಾವುದೇ ನಗರಗಳಿಗಿಂತ ಬೆಂಗಳೂರಿನಲ್ಲಿ ಎಂಎನ್‌ಸಿಗಳ ಕಾರ್ಯನಿರ್ವಹಣೆಗೆ ಪ್ರಶಸ್ತ ವಾತಾವರಣ ಇದೆ
* ಬೆಂಗಳೂರಿನಲ್ಲಿ ಎಂಜಿನಿಯರ್‌ಗಳ ಲಭ್ಯತೆ ಹೆಚ್ಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.