ADVERTISEMENT

ಬಾಬರಿ ಮಸೀದಿ ಧ್ವಂಸದ ಬಳಿಕ ತಂದಿದ್ದ ಇಟ್ಟಿಗೆ ರಾಜ್ ಠಾಕ್ರೆಗೆ ನೀಡಿದ MNS ನಾಯಕ

ಪಿಟಿಐ
Published 6 ಫೆಬ್ರುವರಿ 2024, 10:31 IST
Last Updated 6 ಫೆಬ್ರುವರಿ 2024, 10:31 IST
<div class="paragraphs"><p>ಬಾಬರಿ ಮಸೀದಿ ಧ್ವಂಸದ ನಂತರ ತಂದಿದ್ದ ಇಟ್ಟಿಗೆಯನ್ನು ಎಂಎನ್‌ಎಸ್‌ ಮುಖಂಡ ಬಾಳಾ ನಂದಗಾಂವ್ಕರ್‌ ಅವರು ರಾಜ್‌ ಠಾಕ್ರೆ ಅವರಿಗೆ ಉಡುಗೊರೆಯಾಗಿ ನೀಡುತ್ತಿರುವುದು</p></div>

ಬಾಬರಿ ಮಸೀದಿ ಧ್ವಂಸದ ನಂತರ ತಂದಿದ್ದ ಇಟ್ಟಿಗೆಯನ್ನು ಎಂಎನ್‌ಎಸ್‌ ಮುಖಂಡ ಬಾಳಾ ನಂದಗಾಂವ್ಕರ್‌ ಅವರು ರಾಜ್‌ ಠಾಕ್ರೆ ಅವರಿಗೆ ಉಡುಗೊರೆಯಾಗಿ ನೀಡುತ್ತಿರುವುದು

   

ಚಿತ್ರಕೃಪೆ: ಫೇಸ್‌ಬುಕ್‌ @Bala Nandgaonkar

ಮುಂಬೈ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ತಂದಿದ್ದ ಇಟ್ಟಿಗೆಯನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖಂಡ ಬಾಳಾ ನಂದಗಾಂವ್ಕರ್‌ ಅವರು ಇಂದು (ಮಂಗಳವಾರ) ರಾಜ್‌ ಠಾಕ್ರೆ ಅವರಿಗೆ ಉಡುಗೊರೆಯಾಗಿ ನೀಡಿದರು.

ADVERTISEMENT

16ನೇ ಶತಮಾನದ ಮಸೀದಿಯನ್ನು 1992ರಲ್ಲಿ ‘ಕರ ಸೇವಕರು’ ಕೆಡವಿದ್ದರು.

ನಂದಗಾಂವ್ಕರ್‌ ಅವರು ಸುಮಾರು 32 ವರ್ಷಗಳಿಂದ ಇಟ್ಟಿಗೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಇಟ್ಟಿಗೆಯನ್ನು ಬಾಳಾಸಾಹೇಬ್‌ ಠಾಕ್ರೆ (ಶಿವಸೇನಾ ಸಂಸ್ಥಾಪಕ) ಅವರಿಗೆ ಉಡುಗೊರೆಯಾಗಿ ನೀಡಬೇಕೆಂದು ಬಯಸಿದ್ದೆ. ಆದರೆ ದುಃಖಕರವೆಂದರೆ, ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣಗೊಂಡಿದೆ. ಆದರೆ, ಬಾಳಾಸಾಹೇಬ್‌ ಅವರು ನಮ್ಮೊಂದಿಗೆ ಇಲ್ಲ’ ಎಂದು ನಂದಗಾಂವ್ಕರ್‌ ಹೇಳಿದರು.

ಹೀಗಾಗಿ, ಬಾಳಾಸಾಹೇಬರ ಸಿದ್ಧಾಂತಗಳನ್ನು ಮುನ್ನಡೆಸುತ್ತಿರುವ ರಾಜ್‌ ಠಾಕ್ರೆ ಅವರಿಗೆ ಇಟ್ಟಿಗೆಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿ ಧ್ವಂಸದ ದಿನ ನಾನು ಅಯೋಧ್ಯೆಗೆ ಹೋಗಿದ್ದೆ. ಕರಸೇವೆಗಾಗಿ ನನ್ನೊಂದಿಗೆ ಶಿವಸೇನೆಯ ಅನೇಕ ಕಾರ್ಯಕರ್ತರು ಇದ್ದರು ಎಂದು ನಂದಗಾಂವ್ಕರ್‌ ಹೇಳಿದರು.

‘ಪ್ರಸ್ತುತ ರಾಮಮಂದಿರ ಇರುವ ಸ್ಥಳದಿಂದ ಒಂದು ಇಟ್ಟಿಗೆಯನ್ನು ನೆನಪಿನ ಗುರುತಾಗಿ ಮನೆಗೆ ತರಲು ನಾನು ಬಯಸುತ್ತೇನೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.