ADVERTISEMENT

ರಾಜ್‌ ಠಾಕ್ರೆ ಹೇಳಿಕೆ ಖಂಡಿಸಿ ಪಕ್ಷಕ್ಕೆ ಇಬ್ಬರು ರಾಜೀನಾಮೆ

ಪಿಟಿಐ
Published 5 ಏಪ್ರಿಲ್ 2022, 12:33 IST
Last Updated 5 ಏಪ್ರಿಲ್ 2022, 12:33 IST
ರಾಜ್ ಠಾಕ್ರೆ, ಎಂಎನ್ಎಸ್ ಮುಖ್ಯಸ್ಥ
ರಾಜ್ ಠಾಕ್ರೆ, ಎಂಎನ್ಎಸ್ ಮುಖ್ಯಸ್ಥ   

ಪುಣೆ (ಪಿಟಿಐ): ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆಯಬೇಕು ಎಂಬ ಮಹಾರಾಷ್ಟ್ರ ನವ ನಿರ್ಮಾಣ ಸೇನಾದ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿಕೆ ವಿರೋಧಿಸಿ ಪಕ್ಷದ ಉಪಾಧ್ಯಕ್ಷಶೈಬಾಜ್ ಪಂಜಾಬಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಮೂಲಕ ರಾಜ್‌ಠಾಕ್ರೆ ಹೇಳಿಕೆ ವಿರೋಧಿಸಿ ಕಳೆದೆರಡು ದಿನಗಳಿಂದ ಇಬ್ಬರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದಂತಾಗಿದೆ. ಸೋಮವಾರ ಪುಣೆಯ ಪಕ್ಷದ ಶಾಖಾ ಅಧ್ಯಕ್ಷ ಮಜೀದ್ ಶೇಖ್‌ ರಾಜೀನಾಮೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶೈಬಾಜ್, 'ಎಂಎನ್ಎಸ್ ಆರಂಭವಾದ ದಿನದಿಂದಲೂ ನಾನು ಪಕ್ಷದಲ್ಲಿದ್ದೆ. ಆದರೆ ಇದೀಗ ಮಸೀದಿಯ ಆಜಾನ್ ಹೇಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಇಂಥ ಹೇಳಿಕೆಗಳು ಹೊರಬಿದ್ದ ಬಳಿಕವೂ ಪಕ್ಷದಲ್ಲೇ ಮುಂದುವರಿದರೆ, ಜನರನ್ನು ಎದುರಿಸಲಾಗದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.