ನವದೆಹಲಿ: ಭಾರತೀಯ ಸೇನೆಗೆ ವಿವಿಧ ಸಲಕರಣೆ ಹಾಗೂ ಸಾಧನಗಳನ್ನು ಖರೀದಿಸುವುದಕ್ಕಾಗಿ ರಕ್ಷಣಾ ಇಲಾಖೆಯು ಗುರುವಾರ ₹ 802 ಕೋಟಿ ಮೊತ್ತದ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.
ಸೇನೆಯ ತುಕಡಿಗಳು ಹಾಗೂ ಶಸ್ತ್ರಾಸ್ತ್ರಗಳ ಸಾಗಾಟಕ್ಕೆ 697 ಬೋಗಿಗಳನ್ನು ಒದಗಿಸುವುದಕ್ಕಾಗಿ ಜುಪಿಟರ್ ವ್ಯಾಗನ್ಸ್ ಲಿಮಿಟೆಡ್ ಜೊತೆ ₹ 473 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
56 ‘ಮೆಕಾನಿಕಲ್ ಮೈನ್‌ಫೀಲ್ಡ್ ಮಾರ್ಕಿಂಗ್ ಈಕ್ವಿಪ್‌ಮೆಂಟ್’ಗಳ (ಎಂಎಂಎಂಇ) ಪೂರೈಕೆಗಾಗಿ ಸಾರ್ವಜನಿಕ ವಲಯದ ಉದ್ದಿಮೆ ಬಿಇಎಂಎಲ್ ಜೊತೆ ₹ 329 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.