ADVERTISEMENT

ರಾಜಕೀಯ ಲಾಭಕ್ಕಾಗಿ ಮೋದಿ ಹಿಂದುಳಿದ ಜಾತಿಗೆ ಸೇರಿದರು: ಮಾಯಾವತಿ

ಪಿಟಿಐ
Published 28 ಏಪ್ರಿಲ್ 2019, 6:09 IST
Last Updated 28 ಏಪ್ರಿಲ್ 2019, 6:09 IST
ಮಾಯಾವತಿ
ಮಾಯಾವತಿ   

ಲಖನೌ: ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಜಾತಿಯನ್ನು ಹಿಂದುಳಿದ ಜಾತಿಗಳಪಟ್ಟಿಗೆ ಸೇರಿಸಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ವಿರೋಧ ಪಕ್ಷಗಳು ತನ್ನನ್ನು ಕೆಳಮಟ್ಟದ ವ್ಯಕ್ತಿ ಎಂದು ಅಂದುಕೊಂಡಿವೆಎಂದು ಮೋದಿ ಆರೋಪ ಮಾಡಿದಕ್ಕೆ ಮಾಯಾವತಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಲಖನೌ‍ದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಯಾವತಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ತಮ್ಮ ಜಾತಿಯನ್ನು ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಿದ್ದರು ಎಂದು ಆರೋಪಿಸಿದ್ದಾರೆ. ಚುನಾವಣೆಯ ವೇಳೆ ರಾಜಕೀಯ ಲಾಭ ಪಡೆಯುವುದಕ್ಕಾಗಿ ಮೋದಿ, ಮೇಲ್ಜಾತಿಯನ್ನೂ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿದ್ದರು. ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್‌ನಂತ ಮೋದಿ ಹಿಂದುಳಿದ ಜಾತಿಯಲ್ಲಿ ಹುಟ್ಟಿದವರಲ್ಲ.

ADVERTISEMENT

ಕನೋಜ್‌ನಲ್ಲಿ ಮಾತನಾಡಿದ ಮೋದಿ, ತಾನು ಹಿಂದುಳಿದ ಜಾತಿಯವನಾಗಿದ್ದರಿಂದ ಬೆಹನ್‍ಜೀ ಮತ್ತು ಅಖಿಲೇಶ್ ನನ್ನನ್ನು ಕೆಳಮಟ್ಟದ ವ್ಯಕ್ತಿ ಎಂದು ಭಾವಿಸಿದ್ದಾರೆ ಎಂದಿದ್ದಾರೆ. ಬಿಜೆಪಿಯ ದಲಿತ- ಹಿಂದುಳಿದ ಜಾತಿ ವಿಷಯ ಇಲ್ಲಿ ಕೆಲಸ ಮಾಡಲ್ಲ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.

ಕನೋಜ್‌ನಲ್ಲಿ ಮಾತನಾಡಿದ್ದ ಮೋದಿ, ಎಸ್‌ಪಿ ಮತ್ತು ಬಿಎಸ್‌ಪಿಗಳು ಜಾತಿ ರಾಜಕಾರಣ ಮಾಡುತ್ತಿವೆ. ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಕೊಳ್ಳೆ ಹೊಡೆಯಲಿವೆ’ ‘ಮಾಯಾವತಿಜೀ, ನಾನು ತೀರಾ ಹಿಂದುಳಿದವ. ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆದುತರಬೇಡಿ ಎಂದು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ನೀವು ನನ್ನ ಜಾತಿಯ ವಿಚಾರ ಮಾತನಾಡುವವರೆಗೂ, ದೇಶದ ಜನರಿಗೆ ನನ್ನ ಜಾತಿಯ ಬಗ್ಗೆ ಗೊತ್ತಿರಲಿಲ್ಲ. ಇದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.