ನವದೆಹಲಿ: ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಮಾಡಲಿರುವ ಭಾಷಣಕ್ಕೆ ನೀವೂ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ ಆ್ಯಪ್ ನಲ್ಲಿ ಅಥವಾ https://www.mygov.inನಲ್ಲಿ ನಿಮ್ಮ ಸಲಹೆ ಸೂಚನೆಗಳನ್ನು ಬರೆದು ಕಳುಹಿಸಬಹುದು.
ಮುಂಬರುವ ದಿನಗಳಲ್ಲಿ ನಿಮ್ಮಿಂದ ಉತ್ತಮ ಪ್ರತಿಕ್ರಿಯೆಯನ್ನು ಬಯಸುತ್ತೇನೆ ಎಂದಿದ್ದಾರೆ ಮೋದಿ.
ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಯಾವ ವಿಷಯದ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ಈಗಾಗಲೇ ಜನರು ಸಂದೇಶ ಕಳುಹಿಸಲು ಆರಂಭಿಸಿದ್ದಾರೆ.
ದೇಶದಲ್ಲಿ ಹೆಣ್ಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮೀಸಲಾತಿ, ಜಾತಿ, ಸುಳ್ಳು ಸುದ್ದಿಗಳ ಬಗ್ಗೆ ಮಾತಾಡುವಂತೆ ಕೆಲವು ಪ್ರಜೆಗಳು ಸಲಹೆ ನೀಡಿದ್ದಾರೆ.
ಜಿಎಸ್‍ಟಿಯಿಂದಾಗಿ ಜನ ಸಾಮಾನ್ಯರು ಅನುಭವಿಸಿದ ಕಷ್ಟ, ತಡವಾಗಿ ಪಾವತಿ ಮಾಡಿದ್ದಕ್ಕಿರುವ ದಂಡ, ಜಿಎಸ್‍ಟಿ ಸೈಟ್ ನ ಅವ್ಯವಸ್ಥೆ ಸೇರಿದಂತೆ ಪಾವತಿ ಪ್ರಕ್ರಿಯೆಯಲ್ಲಿ ಮಾಡಲಿಚ್ಛಿಸುತ್ತಿರುವ ಬದಲಾವಣೆ ಮೊದಲಾದುದರ ಬಗ್ಗೆ ಮಾತನಾಡಿ ಎಂದು MyGov ಓಪನ್ ಫೋರಂನಲ್ಲಿ ಸತ್ಯನಾರಾಯಣ್ ಸುಬ್ರಮಣಿಯಮ್ ಎಂಬವರು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.