ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್‌ರಚನೆ ಬುಧವಾರ ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಿತು. ರಾಜ್ಯದಿಂದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ ಮತ್ತು ಎ ನಾರಾಯಣ ಸ್ವಾಮಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಒಟ್ಟು 43 ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಮಧ್ಯಪ್ರದೇಶದ ಮುಂಚೂಣಿ ನಾಯಕ, ಒಂದು ಕಾಲದ ರಾಹುಲ್ ಗಾಂಧಿ ಆಪ್ತನೆಂದೇ ಗುರುತಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ನೂತನ ಮಂತ್ರಿಯಾಗಿ ಮೋದಿ ಟೀಮ್ ಸೇರಿದ್ದಾರೆ.
ನೂತನ ಸಚಿವರ ಪಟ್ಟಿ
1. ನಾರಾಯಣ ಟಾಟು ರಾಣೆ
2. ಸರ್ಬಾನಂದ ಸೋನೊವಾಲ್
3. ವೀರೇಂದ್ರ ಕುಮಾರ್
4. ಜ್ಯೋತಿರಾದಿತ್ಯ ಸಿಂಧ್ಯಾ
5. ರಾಮಚಂದ್ರ ಪ್ರಸಾದ್ ಸಿಂಗ್
6. ಅಶ್ವಿನಿ ವೈಷ್ಣವ್
7. ಪಶುಪತಿ ಕುಮಾರ್ ಪರಾಸ್
8. ಕಿರಣ್ ರಿಜಿಜು
9. ರಾಜ್ ಕುಮಾರ್ ಸಿಂಗ್
10. ಹರ್ದೀಪ್ ಸಿಂಗ್ ಪುರಿ
11. ಮನ್‌ಸುಖ್ ಮಾಂಡವಿಯಾ
12. ಭೂಪೇಂದರ್ ಯಾದವ್
13. ಪರ್ಶೋತ್ತಮ್ ರೂಪಾಲಾ
14. ಜಿ ಕೃಷ್ಣಾ ರೆಡ್ಡಿ
15. ಅನುರಾಗ್ ಸಿಂಗ್ ಠಾಕೂರ್
16. ಪಂಕಜ್ ಚೌಧರಿ
17. ಅನುಪ್ರಿಯಾ ಸಿಂಗ್ ಪಟೇಲ್
18. ಡಾ. ಸತ್ಯಪಾಲ್ ಸಿಂಗ್ ಬಾಘೆಲ್
19. ರಾಜೀವ್ ಚಂದ್ರಶೇಖರ್
20. ಶೋಭಾ ಕರಂದ್ಲಾಜೆ
21. ಭಾನು ಪ್ರತಾಪ್ ಸಿಂಗ್ ವರ್ಮಾ
22. ದರ್ಶನಾ ವಿಕ್ರಮ್ ಜರ್ದೊಶ್
23. ಮೀನಾಕ್ಷಿ ಲೇಖಿ
24. ಅನ್ನಪೂರ್ಣ ದೇವಿ
25. ಎ. ನಾರಾಯಣಸ್ವಾಮಿ
26. ಕೌಶಲ್ ಕಿಶೋರ್
27. ಅಜಯ್ ಭಟ್
28. ಬಿ.ಎಲ್ ವರ್ಮಾ
29. ಅಜಯ್ ಕುಮಾರ್
30. ಚೌಹಾಣ್ ದೇವುಸಿಂಗ್
31. ಭಗವಂತ ಖೂಬಾ
32. ಕಪಿಲ್ ಮೊರೇಶ್ವರ್ ಪಾಟಿಲ್
33. ಪ್ರತಿಮಾ ಭೌಮಿಕ್
34. ಸುಭಾಶ್ ಸರ್ಕಾರ್
35. ಭಾಗವತ್ ಕಿಶನ್‌ರಾವ್ ಕಾರದ್
36. ರಾಜಕುಮಾರ್ ರಂಜನ್ ಸಿಂಗ್
37. ಭಾರತಿ ಪ್ರವೀಣ್ ಪವಾರ್
38. ಬಿಶ್ವೇಶ್ವರ್ ತುಡು
39. ಶಂತನು ಠಾಕುರ್
40. ಮಂಜಪರ ಮಹೇಂದ್ರಭಾಯಿ
41. ಜೋನ್ ಬರ್ಲಾ
42. ಡಾ. ಎಲ್ ಮುರುಗನ್
43. ನಿಶಿತ್ ಪ್ರಾಮಾಣಿಕ್
ರಾಜ್ಯದ ನಾಲ್ವರಿಗೂ ರಾಜ್ಯ ಖಾತೆ ಸಚಿವ ಸ್ಥಾನ: ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆ, ಎ.ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ರಾಜೀವ್ ಚಂದ್ರಶೇಖರ್ ಅವರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಭಗವಂತ ಖೂಬಾ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.