ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರ ನೋಂದಣಿ(ಎನ್‌ಆರ್‌ಸಿ) ಅನುಷ್ಠಾನಗೊಳಿಸಲು ಯಾರಿಗೂ ಅನುಮತಿ ನೀಡವುದಿಲ್ಲ.ಈ ರಾಜ್ಯದಲ್ಲಿ ಯಾರು ಇರಬೇಕು,ಯಾರು ಹೊರಬೇಕು ಎಂಬುದನ್ನು ನಿರ್ಧರಿಸುವುದು ಮೋದಿ ಅಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಗುರುವಾರ ಇಲ್ಲಿನ ಕೂಚ್ ಬೆಹಾರ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ, ಪೌರತ್ವ (ತಿದ್ದುಪಡಿ)ಮಸೂದೆಯ ಮೂಲಕ ದೇಶದಲ್ಲಿ ನ್ಯಾಯಯುತವಾಗಿ ಬದುಕುತ್ತಿರುವ ಪೌರರನ್ನು ವಲಸೆಗಾರರನ್ನಾಗಿ ಮಾಡುವ ಹುನ್ನಾರ ಬಿಜೆಪಿಯದ್ದು. ಈ ಮಸೂದೆಯನ್ನು ತರುವ ಮೂಲಕ ಜನರಲ್ಲಿ ಭಿನ್ನತೆ ಸೃಷ್ಟಿಸಲು ಕೇಂದ್ರ ಯತ್ನಿಸುತ್ತಿದೆ.ರಾಷ್ಟ್ರೀಯ ಪೌರತ್ವ ನೋಂದಣಿ ಎಂಬುದು ಚುನಾವಣಾ ಗಿಮಿಕ್.
6 ವರ್ಷಗಳ ಕಾಲ ಇದ್ದ ಬಾಂಗ್ಲಾದೇಶ ಆವೃತ ವಲಯದ ಸಮಸ್ಯೆಯನ್ನು ಬಂಗಾಳ ಸರ್ಕಾರವೇ ಪರಿಹರಿಸಿದೆ ಹೊರತು ಮೋದಿ ಸರ್ಕಾರವಲ್ಲ. ನೀಡಿದ ಭರವಸೆಯನ್ನು ಈಡೇರಿಸಲಾಗದ ಚಾಯ್‍ವಾಲಾ ಇದೀಗ ಚೌಕೀದಾರ್ ಆಗಿ ಜನ ಸಮೂಹವನ್ನು ಮೋಸ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಮತ್ತೊಮ್ಮೆ ಅಧಿಕಾರಕ್ಕೇರಿದರೆ ಅವರು ಏನು ಬೇಕಾದರೂ ಮಾಡಬಲ್ಲರು.ಇದು ಅವರ ಕೊನೆಯಚುನಾವಣೆಯಾಗುವ ಸಾಧ್ಯತೆ ಇದೆ.ಲೂಟಿ, ದೊಂಬಿಮತ್ತು ಜನರನ್ನು ಹತ್ಯೆ ಮಾಡಿ - ಇದು ಮೂರು ಮೋದಿಯವರ ಘೋಷಣೆ ಎಂದು ಮಮತಾ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.