ನವದೆಹಲಿ: ಅಕ್ಷಯ ತೃತೀಯಾ, ಬಸವ ಜಯಂತಿ ಮತ್ತು ಈದ್–ಉಲ್–ಫಿತ್ರ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
‘ಅಕ್ಷಯ ತೃತೀಯಾ ಕೋವಿಡ್ 19 ಪಿಡುಗನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಗೆ ಬಲವನ್ನು ತರಲಿ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಅವರು ಪರಶುರಾಮ ಜಯಂತಿ ಹಿನ್ನೆಲೆಯಲ್ಲೂಶುಭಾಶಯ ಕೋರಿದ್ದಾರೆ.
‘ಈದ್ ಸಂದರ್ಭದಲ್ಲಿ ನಾನು ಎಲ್ಲರಿಗೂ ಉತ್ತಮ ಆರೋಗ್ಯ ದೊರಕಲೆಂದು ಪ್ರಾರ್ಥಿಸುತ್ತೇನೆ. ಜಾಗತಿಕವಾಗಿ ವ್ಯಾಪಿಸಿರುವ ಕೋವಿಡ್ ಪಿಡುಗನ್ನು ಮೆಟ್ಟಿನಿಲ್ಲುವ ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಇನ್ನಷ್ಟು ಶಕ್ತಿ ತುಂಬಲಿ, ಮಾನವ ಕಲ್ಯಾಣಕ್ಕಾಗಿ ನಾವೆಲ್ಲ ಇನ್ನಷ್ಟು ಕೆಲಸ ಮಾಡೋಣ, ಈದ್ ಮುಬಾರಕ್’ ಎಂದು ಅವರು ಟ್ವೀಟ್ ಮಾಡಿದ್ದಾರೆ.
'ಸಮಾಜದಲ್ಲಿ ಸಾಮರಸ್ಯ, ಸಾಮಾಜದ ಏಳಿಗೆ ಹಾಗೂ ಭ್ರಾತ್ವತ್ವ ವಿಸ್ತರಿಸುವ ಜಗದ್ಗುರು ಬಸವೇಶ್ವರರ ಬೋಧನೆಗಳು ಹಲವು ಜನರಿಗೆ ಸ್ಫೂರ್ತಿಯಾಗುವುದು ಮುಂದುವರಿಯಲಿದೆ...' ಎಂದು ಟ್ವೀಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.