ADVERTISEMENT

ಪ್ರಧಾನಿ ಮೋದಿ ಸರ್ಕಾರದಿಂದ ವೈಜ್ಞಾನಿಕ ಸಂಶೋಧನೆ ನಾಶ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 13 ಜುಲೈ 2023, 9:35 IST
Last Updated 13 ಜುಲೈ 2023, 9:35 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ನಾಶಪಡಿಸುವುದರಲ್ಲಿ ತಲ್ಲೀನವಾಗಿದ್ದು, ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶದ ಸಂಶೋಧನಾ ಕ್ಷೇತ್ರದ ವಿಜ್ಞಾನಿಗಳಿಗೆ ಹಣಕಾಸಿನ ನೆರವು ದೊರಕಿಲ್ಲ. ಸಂಶೋಧನೆ ನಡೆಸಲು ತಮ್ಮದೇ ಉಳಿತಾಯವನ್ನು ನೀಡುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎನ್‌ಆರ್‌ಎಫ್) ಸ್ಥಾಪನೆಗೆ ಹೆಚ್ಚಿನ ಹಣಕಾಸಿನ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಕಳೆದ ಮೂರು ತಿಂಗಳಿಂದ ಪ್ರಾಜೆಕ್ಟ್ ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಖಾಸಗಿ ಹಣಕಾಸಿನ ನೆರವನ್ನು ಸ್ವಾಗತಿಸತ್ತೇವೆ. ಆದರೆ ಸರ್ಕಾರದ ನೆರವು ನಿಲ್ಲಬಾರದು ಎಂದು ಹೇಳಿದ್ದಾರೆ.

2023ರ ಬಜೆಟ್‌ನಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಅನುದಾನವನ್ನು ಶೇ 6.87ರಷ್ಟು ಕಡಿತಗೊಳಿಸಲಾಗಿದೆ ಎಂದು ಖರ್ಗೆ ಉಲ್ಲೇಖ ಮಾಡಿದ್ದಾರೆ.

ವೈಜ್ಞಾನಿಕ ಸಂಶೋಧನೆಯನ್ನು ಪ್ರೋತ್ಸಾಹಿಸುವ ಬದಲು ಮೋದಿ ಸರ್ಕಾರ ಪದೇ ಪದೇ ತಿರಸ್ಕರಿಸಿದೆ ಎಂದು 2017ರಲ್ಲಿ ವಿಜ್ಞಾನಿಗಳು 27 ನಗರಗಳಲ್ಲಿ ನಡೆಸಿದ ಪ್ರತಿಭಟನೆಯ ಚಿತ್ರವನ್ನು ಖರ್ಗೆ ಹಂಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.