ADVERTISEMENT

‘ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ’ ಅಂಗವಾಗಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 8:16 IST
Last Updated 6 ಜೂನ್ 2022, 8:16 IST
ನಾಣ್ಯ ಬಿಡುಗಡೆ ಮಾಡಿದ ನರೇಂದ್ರ ಮೋದಿ
ನಾಣ್ಯ ಬಿಡುಗಡೆ ಮಾಡಿದ ನರೇಂದ್ರ ಮೋದಿ    

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಶೇಷ ಸರಣಿಯ ನಾಣ್ಯಗಳನ್ನು ಬಿಡುಗಡೆ ಮಾಡಿದರು. ದೃಷ್ಟಿಹೀನರೂ ಗುರುತಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿರುವುದು ಈ ನಾಣ್ಯಗಳ ವಿಶೇಷತೆಯಾಗಿದೆ.

‘ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ’ದ ಸ್ಮರಣಾರ್ಥ ₹1, 2, 5, 10 ಮತ್ತು ₹20 ಮುಖಬೆಲೆಯ ನಾಣ್ಯಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದ್ದು, ಚಲಾವಣೆಗೂ ತರಲಾಗುತ್ತಿದೆ.

‘ಈ ಹೊಸ ಸರಣಿಯ ನಾಣ್ಯಗಳು ‘ಅಮೃತ ಕಾಲ’ದ ಗುರಿಯನ್ನು ಜನರಿಗೆ ನೆನಪಿಸುತ್ತವೆ. ದೇಶದ ಅಭಿವೃದ್ಧಿಗೆ ಶ್ರಮಿಸಲು ಜನರನ್ನು ಪ್ರೇರೇಪಿಸುತ್ತವೆ’ ಎಂದು ಹಣಕಾಸು ಸಚಿವಾಲಯ ಆಯೋಜಿಸಿದ್ದ ‘ಐಕಾನಿಕ್‌ ವೀಕ್‌’ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡುತ್ತ ಮೋದಿ ಹೇಳಿದರು.

ADVERTISEMENT

12 ಸರ್ಕಾರಿ ಯೋಜನೆಗಳನ್ನು ಒಳಗೊಂಡ 'ಜನ್ ಸಮರ್ಥ್ ಪೋರ್ಟಲ್'ಗೆ ಮೋದಿ ಅವರು ಇದೇ ವೇಳೆ ಚಾಲನೆ ನೀಡಿದರು.

‘ಕೇಂದ್ರದ 12 ಯೋಜನೆಗಳು ಒಂದೇ ವೇದಿಕೆಯಡಿ ಲಭ್ಯವಾಗುತ್ತವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.