ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಭಾರತೀಯ ರೈಲ್ವೆಯು ತಾನು ಹಲವು ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೂ, ದೇಶದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ರೈಲು ಪ್ರಯಾಣದ ಗ್ಯಾರಂಟಿ ನೀಡುವವರೆಗೂ ನಾವು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
2047ರೊಳಗೆ ವಿಕಸಿತ್ ಭಾರತ್ ಸಂಕಲ್ಪ ಮುಟ್ಟಲು ದಕ್ಷಿಣ ಭಾರತ ರಾಜ್ಯಗಳ ತ್ವರಿತಗತಿಯ ಬೆಳವಣಿಗೆಯೇ ಪ್ರಮುಖ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಬಜೆಟ್‌ನಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ರೈಲು ಯೋಜನೆಗಳಿಗೆ ಹೆಚ್ಚಿನ ಹಣ ನೀಡಿರುವುದರಿಂದ ಈ ರಾಜ್ಯಗಳಲ್ಲಿ ರೈಲ್ವೆ ಸಾರಿಗೆ ಉತ್ತಮ ದರ್ಜೆಯಲ್ಲಿದೆ ಎಂದು ಹೇಳಿದ್ದಾರೆ.
ಚಾಲನೆ ನೀಡಲಾಗಿರುವ ರೈಲುಗಳು
ಬೆಂಗಳೂರು-ಮಧುರೈ (ರೈಲು ನಂ. 20671/20672)
ಮೀರತ್-ಲಖನೌ (ರೈಲು ನಂ. 22490/22489)
ಚೆನ್ನೈ–ನಾಗರಕೋಯಿಲ್ (ರೈಲು ನಂ. 20627/20628)
ಈ ರೈಲುಗಳು ಬೆಂಗಳೂರು-ಮಧುರೈ, ಮೀರತ್-ಲಖನೌ ಮತ್ತು ಚೆನ್ನೈ–ನಾಗರಕೋಯಿಲ್ ನಡುವೆ ಸಂಚರಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.