ಬೆಂಗಳೂರು: 'ಆರ್‌ಎಸ್‌ಎಸ್ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿರುವ ಚೇಳಿನಂತೆ, ಅದನ್ನು ಕೈಯಿಂದ ತೆಗೆದು ಬಿಸಾಡುವುದಕ್ಕೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗಲ್ಲ' ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ತರೂರ್ ಹೇಳಿದ್ದೇನು?
ಆರ್‌ಎಸ್‌ಎಸ್ ಮತ್ತು ಮೋದಿ ನಡುವಿನ ವೈರುಧ್ಯದ ಬಗ್ಗೆ ಮಾತನಾಡಿದ ತರೂರ್, ಹೆಸರು ಹೇಳಲಿಚ್ಛಿಸದಆರ್‌ಎಸ್‌ಎಸ್‍ನ ವ್ಯಕ್ತಿಯೊಬ್ಬರು ಕ್ಯಾರವಾನ್ನ ಪತ್ರಕರ್ತ ವಿನೋದ್ ಜೋಸ್ ಅವರಲ್ಲಿ ಹೇಳಿದ ರೂಪಕ ಇದು.'ಮೋದಿ ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ. ಅದನ್ನು ನೀವು ಕೈಯಿಂದ ತೆಗೆಯಲೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗುವುದಿಲ್ಲ '
ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಭಾನುವಾರತರೂರ್ ಅವರ The Paradoxical Prime Minister ಪುಸ್ತಕ ಬಿಡುಗಡೆಯಾಗಿದೆ.ಈ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, ಮೋದಿತ್ವದಿಂದಾಗಿ (ಮೋದಿ+ಹಿಂದುತ್ವ) ಮೋದಿ ಯವರು ಆರ್‌ಎಸ್‌ಎಸ್ನಿಂದ ಮೇಲಿನ ಸ್ಥಾನಕ್ಕೇರಿದ್ದಾರೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಧೋರಣೆಗಳ ಬಗ್ಗೆ ಕಿಡಿಕಾರಿದ ತರೂರ್, ಇದೀಗ ಸರ್ಕಾರದ ಉನ್ನತ ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಿಸಲು ಪ್ರಧಾನಿ ಕಚೇರಿಯಿಂದ ಅನುಮತಿ ಪಡೆಯಲು ಕಾಯಬೇಕಾಗಿದೆ. ಸಿಬಿಐ ನಿರ್ದೇಶಕರನ್ನು ಬದಲಿಸಿದ್ದು ಗೃಹ ಸಚಿವರಿಗೆ ಗೊತ್ತೇ ಇಲ್ಲ. ಸರ್ಕಾರದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಬಗ್ಗೆ ವಿದೇಶಾಂಗ ಸಚಿವರಿಗೆ ಗೊತ್ತಿರಲ್ಲ, ಕೊನೆಯ ಕ್ಷಣವರೆಗೂ ರಫೇಲ್ ಒಪ್ಪಂದದಲ್ಲಿ ಯಾವ ಬದಲಾವಣೆ ಆಯಿತು ಎಂಬುದು ರಕ್ಷಣಾ ಸಚಿವರಿಗೂ ಗೊತ್ತಿಲ್ಲ. ಇದೆಲ್ಲವೂ ಮೋದಿ ಆಡಳಿತದ ಪರಿಣಾಮ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.