ನವದೆಹಲಿ: ಎನ್‌ಐಟಿ ಮತ್ತು ಇತರೆ ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಿಗೆ ಪ್ರವೇಶ ಪಡೆಯಲು 12ನೇ ತರಗತಿಯಲ್ಲಿ ಶೇ 75 ಅಂಕಗಳಿಸಿರಬೇಕು ಎಂಬ ನಿಯಮಕ್ಕೆ ಶಿಕ್ಷಣ ಸಚಿವಾಲಯ ಮಂಗಳವಾರ ರಿಯಾಯಿತಿ ನೀಡಿದೆ.
ಐಐಟಿ–ಜೆಇಇ (ಅಡ್ವಾನ್ಸಡ್) ಸಂಬಂಧ ಕೈಗೊಂಡಿರುವ ನಿಲುವು ಮತ್ತು ಕಳೆದ ಶೈಕ್ಷಣಿಕ ವರ್ಷದ ತೀರ್ಮಾನವನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2021–2022ನೇ ಸಾಲಿಗೆ ಎನ್‌ಐಟಿಗಳು, ಐಐಐಟಿಗಳು, ಎಸ್‌ಪಿಎ ಮತ್ತು ಇತರೆ ಸಿಎಫ್‌ಟಿಐ ಸಂಸ್ಥೆಗಳ ಪ್ರವೇಶಗಳಿಗೆ ಅನ್ವಯಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸೀಟು ಹಂಚಿಕೆ ಮಂಡಳಿ (ಸಿಎಸ್‌ಎಬಿ) ಕಳೆದ ವರ್ಷ ಎನ್‌ಐಟಿ ಮತ್ತು ಸಿಎಫ್‌ಟಿಐಗಳಿಗೆ ಅನ್ವಯಿಸಿ ಪ್ರವೇಶ ನಿಯಮಗಳಲ್ಲಿ ರಿಯಾಯಿತಿಯನ್ನು ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.