ಕೊಚ್ಚಿ: ಸೂಪರ್‌ಸ್ಟಾರ್ ನಟ ದಿಲೀಪ್ ಅವರ ರಾಜಿನಾಮೆಯನ್ನು ಅಂಗೀಕರಿಸಿರುವುದಾಗಿ ಮಲಯಾಳ ಚಿತ್ರ ಕಲಾವಿದರ ಸಂಘ (ಅಮ್ಮ)ದ ಅಧ್ಯಕ್ಷ ಹಾಗೂ ಜನಪ್ರಿಯನಟ ಮೋಹನ್ ಲಾಲ್ ಶುಕ್ರವಾರ ತಿಳಿಸಿದ್ದಾರೆ.
ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ನಟ ದಿಲೀಪ್‌ಅವರ ಮೇಲಿತ್ತು. ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (ಡಬ್ಲ್ಯುಸಿಸಿ) ಸಂಘ ನೀಡಿರುವ ದೂರನ್ನು ಪರಿಗಣಿಸಿ ದಿಲೀಪ್ ರಾಜಿನಾಮೆಯನ್ನು ಮಾನ್ಯ ಮಾಡಿರುವುದಾಗಿ ನಟ ಮೋಹನ್ ಲಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ರಾಜಿನಾಮೆ ನೀಡಿರುವ ನಟರನ್ನು ಮತ್ತೆ ಸಂಘಕ್ಕೆ ಆಹ್ವಾನಿಸುವುದಿಲ್ಲಆದಾಗ್ಯೂ ಅವರು ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಮೋಹನ್ ಲಾಲ್ ಸ್ಪಷ್ಟಪಡಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಮಲಯಾಳಂ ನಟ ದಿಲೀಪ್ ಜೈಲಿಗೆ ಹೋಗಿದ್ದರು. ಈ ವೇಳೆ ದಿಲೀಪ್ ಅವರನ್ನು ಸಂಘದದಿಂದ ಹೊರ ಹಾಕಲಾಗಿತ್ತು. ಅವರು ಜಾಮೀನು ಪಡೆದುಜೈಲಿನಿಂದ ಹೊರ ಬಂದ ಬಳಿಕ ದಿಲೀಪ್ ಸದಸ್ಯತ್ವವನ್ನು ’ಅಮ್ಮ’ ಮುಂದುವರಿಸಿತ್ತು. ಈ ಬೆಳವಣಿಗೆ ಮಲಯಾಳಂ ಚಿತ್ರರಂಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ದಿಲೀಪ್ ಸದಸ್ಯತ್ವ ಮಾನ್ಯ ಮಾಡಿರುವುದನ್ನು ವಿರೋಧಿಸಿ ಕೆಲವು ನಟ ನಟಿಯರು ’ಅಮ್ಮ ’ಗೆ ರಾಜಿನಾಮೆ ನೀಡಿದ್ದರು.ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನಟಿಯರು ಮತ್ತು ಮಹಿಳಾ ತಂತ್ರಜ್ಞರು ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (ಡಬ್ಲ್ಯುಸಿಸಿ) ಎಂಬ ಸಂಘಟನೆ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.