ಇಂದೋರ್: ಇಂದು (ಸೋಮವಾರ) ಚಂದ್ರಗ್ರಹಣ ಸಂಭವಿಸುತ್ತಿದೆ. ಆದರೆ, ಭಾರತದಲ್ಲಿ ಗೋಚರಿಸುತ್ತಿಲ್ಲ. ಗ್ರಹಣ ನಡೆಯುವ ಹೊತ್ತಿಗೆ ಭಾರತದಲ್ಲಿ ಮಧ್ಯಾಹ್ನವಾಗುವ ಕಾರಣ ಭಾರತೀಯರಿಗೆ ಕಾಣಸಿಗುವುದಿಲ್ಲ ಎಂದು ಮಧ್ಯಪ್ರದೇಶದ ಉಜ್ಜಯಿನಿಯ 'ಜಿವಾಜಿ ವೀಕ್ಷಣಾಲಯ'ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಇದು 'ಪೆನಂಬ್ರಲ್' (ಅರೆನೆರಳು) ಚಂದ್ರ ಗ್ರಹಣ.' ಸೋಮವಾರ ಮಧ್ಯಾಹ್ನ 12:59:09 ಕ್ಕೆ ಪ್ರಾರಂಭವಾಗಿ, ಸಂಜೆ 05:25:09 ರವರೆಗೆ ಮುಂದುವರಿಯಲಿದೆ,' ಎಂದು ವೀಕ್ಷಣಾಲಯದ ಅಧೀಕ್ಷಕ ರಾಜೇಂದ್ರ ಪ್ರಕಾಶ್ ಗುಪ್ತಾ ಭಾನುವಾರ ತಿಳಿಸಿದ್ದಾರೆ.
'ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಒಂದೇ ಸರಳ ರೇಖೆಯಲ್ಲಿ ಬಂದಾಗ ಅರೆನೆರಳು ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲ್ಮೈಗೆ ತಲುಪದಂತೆ ಭೂಮಿಯು ತಡೆಯುತ್ತದೆ. ಚಂದ್ರನನ್ನು ಭೂಮಿ ತನ್ನ ನೆರಳಿನಿಂದ ಆವರಿಸಿಕೊಳ್ಳುತ್ತದೆ. ಇದನ್ನೇ 'ಪೆನಂಬ್ರ' ಎಂದು ಕರೆಯಲಾಗುತ್ತದೆ,' ಎಂದು ಗುಪ್ತಾ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.