ADVERTISEMENT

ಅಂಡಮಾನ್ -ನಿಕೋಬಾರ್ ದ್ವೀಪಗಳಲ್ಲಿ ಏರ್ಪಟ್ಟ ಮಾರುತಗಳು: ಐಎಂಡಿ ವರದಿ

ಪಿಟಿಐ
Published 19 ಮೇ 2023, 15:43 IST
Last Updated 19 ಮೇ 2023, 15:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಗ್ನೇಯ ಬಂಗಾಳ ಕೊಲ್ಲಿ, ನಿಕೋಬಾರ್‌ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್‌ನ ಸಮುದ್ರದಲ್ಲಿ ನೈರುತ್ಯ ಮಾನ್ಸೂನ್‌ ಮಾರುತಗಳು ಏರ್ಪಟ್ಟಿದ್ದು, ದೇಶದ ಕೃಷಿ ಆರ್ಥಿಕತೆಗೆ ನಿರ್ಣಾಯಕ ನಾಲ್ಕು ತಿಂಗಳ ಮಳೆಗಾಲಕ್ಕೆ ವೇದಿಕೆ ಸಿದ್ಧವಾಗಿದೆ.

ಈ ವಾರದ ಆರಂಭದಲ್ಲಿ ಕೇರಳದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಅದು ಮುಖ್ಯ ಭೂಭಾಗಕ್ಕೆ ಪ್ರವೇಶಿಸುವುದು ಜೂನ್‌ 1ರ ಸಾಮಾನ್ಯ ದಿನಾಂಕಕ್ಕಿಂತ ಸ್ವಲ್ಪ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

‘ನೈರುತ್ಯ ಮಾನ್ಸೂನ್ ಇಂದು ಆಗ್ನೇಯ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಕೆಲವು ಭಾಗಗಳಲ್ಲಿ ಏರ್ಪಟ್ಟಿವೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಮುಂದಿನ ಮೂರು–ನಾಲ್ಕು ದಿನಗಳಲ್ಲಿ ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ರೂಪುಗೊಳ್ಳಲು ಪರಿಸ್ಥಿತಿ ಅನುಕೂಲಕರವಾಗಿವೆ ಎಂದು ಅದು ಹೇಳಿದೆ.

ಕೇರಳದಲ್ಲಿ ಜೂನ್‌ 4ರಂದು ಮುಂಗಾರು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಮಂಗಳವಾರ ಹವಾಮಾನ ಇಲಾಖೆ ತಿಳಿಸಿತ್ತು.

ಕಳೆದ ವರ್ಷ 2022ರ ಮೇ 29ರಂದು, 2021ರಲ್ಲಿ ಜೂನ್‌ 3ರಂದು, 2020ರಲ್ಲಿ ಜೂನ್‌ 1ರಂದು, 2019ರಲ್ಲಿ ಜೂನ್‌ 8 ರಂದು ಮತ್ತು 2018ರಲ್ಲಿ ಮೇ 29ರಂದು ಮಾನ್ಸೂನ್‌ ಕೇರಳಕ್ಕೆ ಪ್ರವೇಶಿಸಿತ್ತು.

ದೇಶದ 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕೃಷಿಯು ಶೇಕಡ 15 ರಷ್ಟು ಕೊಡುಗೆ ನೀಡುತ್ತಿದೆ. ಉತ್ತಮ ಮಾನ್ಸೂನ್, ಜಮೀನುಗಳಿಗೆ ನೀರುಣಿಸುವ ಜೊತೆಗೆ ಜಲಾಶಯಗಳ ಮರು ಭರ್ತಿಗೆ ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.