ADVERTISEMENT

ಶ್ರೀಲಂಕಾ ಪ್ರವೇಶಿಸಿದ ಮುಂಗಾರು, ಕೇರಳದತ್ತ ಮಾರುತಗಳು

ಪಿಟಿಐ
Published 26 ಮೇ 2022, 18:48 IST
Last Updated 26 ಮೇ 2022, 18:48 IST
   

ನವದೆಹಲಿ: ಆರು ದಿನಗಳ ವಿರಾಮದ ಬಳಿಕ ನೈರುತ್ಯ ಮುಂಗಾರು ಗುರುವಾರ ದಕ್ಷಿಣ ಶ್ರೀಲಂಕಾವನ್ನು ಆವರಿಸಿದ್ದು, ಕ್ರಮೇಣ ಕೇರಳದ ಕಡೆಗೆ ಚಲಿಸಲಾರಂಭಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ದಕ್ಷಿಣ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್‌ನ ಬಹುತೇಕ ಭಾಗ, ಲಕ್ಷದ್ವೀಪದ ಪಕ್ಕದ ಪ್ರದೇಶಗಳಲ್ಲಿ ನೈರುತ್ಯ ಮುಂಗಾರು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ’ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ ಕೇರಳ, ಲಕ್ಷದೀಪದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

ADVERTISEMENT

ನೈರುತ್ಯ ಮುಂಗಾರುಇದೇ 27ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು.ಕೇರಳದಲ್ಲಿ ಸಾಮಾನ್ಯವಾಗಿ ಜೂನ್‌ 1ಕ್ಕೆ ಮುಂಗಾರು ಆರಂಭವಾಗುವುದು ವಾಡಿಕೆ.

ಮುಂಗಾರು ವೀಕ್ಷಕರ ಪ್ರಕಾರ, ಈ ತಿಂಗಳ ಆರಂಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ಅಸನಿ ಚಂಡಮಾರುತದಿಂದಾಗಿ ನೈರುತ್ಯ ಮುಂಗಾರು ವೇಗ ಪಡೆದುಕೊಂಡಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳನ್ನು ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚೆಯೇ ಅಂದರೆ, ಮೇ 16ರಂದು ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.