ADVERTISEMENT

ಕ್ಷಯರೋಗಿಗಳಿಗೆ ಆರ್ಥಿಕ ನೆರವು ಮಾಸಿಕ ₹1000ಕ್ಕೆ ಏರಿಕೆ

ಪಿಟಿಐ
Published 7 ಅಕ್ಟೋಬರ್ 2024, 15:46 IST
Last Updated 7 ಅಕ್ಟೋಬರ್ 2024, 15:46 IST
   

ನವದೆಹಲಿ: ಕ್ಷಯರೋಗಿಗಳಿಗೆ ಚಿಕಿತ್ಸೆಯ ಅವಧಿಯಲ್ಲಿ ‘ನಿ–ಕ್ಷಯ್ ಪೋಷಣ್’ ಯೋಜನೆಯಡಿ ನೀಡುವ ಮಾಸಿಕ ಹಣಕಾಸು ನೆರವನ್ನು ಈಗಿನ ₹ 500 ರಿಂದ ₹ 1000ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.

‘ಯೋಜನೆಗಾಗಿ ಹೆಚ್ಚುವರಿಯಾಗಿ ₹ 1,040 ಕೋಟಿ ಹಂಚಿಕೆಯಾಗಿದೆ. ಈ ಯೋಜನೆಯಡಿ ಎಲ್ಲ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೆರವು ನೀಡಲಾಗುವುದು. ಕ್ಷಯ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT