ನವದೆಹಲಿ: ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಆಜಾದ್ ಪಕ್ಷದಿಂದ (ಡಿಎಪಿ) ಇನ್ನೂ ಹಲವರು ಮಂಗಳವಾರ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ಸೋಮವಾರ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಡಿಎಪಿಯಲ್ಲಿದ್ದ ಜಮ್ಮು–ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾಚಂದ್ ಮತ್ತು ಪೀರ್‌ಜಾದಾ ಮೊಹಮ್ಮದ್ ಸಯೀದ್ ಸೇರಿದಂತೆ ಒಟ್ಟು 17 ನಾಯಕರು ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದರು.
‘ಆಜಾದ್ ಅವರ ಡಿಎಪಿ ಪಕ್ಷವು ಕಣ್ಮರೆಯಾಗಲಿದ್ದು, ಅಲ್ಲಿನ ಅನೇಕ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ’ ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
‘ಜ.19ರಂದು ಭಾರತ್ ಜೋಡೊ ಯಾತ್ರೆಯನ್ನು ಸ್ವಾಗತಿಸಲಿರುವ ಜಮ್ಮುವಿನಿಂದ ಸುದ್ದಿಯನ್ನು ನಿರೀಕ್ಷಿಸಿ’ ಎಂದೂ ರಮೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.