ನವದೆಹಲಿ: ರಾಜಧಾನಿಯ ಜೈಲುಗಳಿಂದ ಕಳೆದ ಎರಡೂವರೆ ತಿಂಗಳಲ್ಲಿ 348 ಮೊಬೈಲ್ ಪೋನ್‌ಗಳನ್ನು ದೆಹಲಿಯ ಕಾರಾಗೃಹ ಇಲಾಖೆಯು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಕಾರಾಗೃಹ ಇಲಾಖೆ ಪೊಲೀಸ್ ನಿರ್ದೇಶಕ ಸಂಜಯ್ ಬನಿವಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಬುಧವಾರ ನಡೆಸಿದ ದಾಳಿಯಲ್ಲಿ ಜೈಲುಗಳಿಂದ 18 ಫೋನ್ ಹಾಗೂ ಚಾರ್ಜರ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಜೈಲಿನ ಒಳಗೆ ಗುಪ್ತಚರ ಜಾರಿಯ ನಂತರ ನಿರಂತರ ದಾಳಿ ನಡೆಸಲಾಗುತ್ತಿದೆ. ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.