ADVERTISEMENT

ಸ್ವಚ್ಛತಾ ಅಭಿಯಾನದಲ್ಲಿ 8.75 ಕೋಟಿ ಜನರು ಭಾಗಿ: ಕೇಂದ್ರ ವಸತಿ ಸಚಿವಾಲಯ

ಪಿಟಿಐ
Published 4 ಅಕ್ಟೋಬರ್ 2023, 2:49 IST
Last Updated 4 ಅಕ್ಟೋಬರ್ 2023, 2:49 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

 ಚಿತ್ರ: ರಾಯಿಟರ್ಸ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್‌ 1ರಂದು ಕರೆ ನೀಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ದೇಶದಾದ್ಯಂತ ಸುಮಾರು 8.75 ಕೋಟಿ ಜನರು ಭಾಗಿಯಾಗಿದ್ದರು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ADVERTISEMENT

‘ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಚ್ಛ ಭವಿಷ್ಯವನ್ನು ರೂಪಿಸಲು ಈ ಪ್ರಯತ್ನಕ್ಕೆ ಕೈಜೋಡಿಸಿ’ ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು.

‘ಸ್ವಚ್ಛತಾ ಹಿ ಸೇವಾ (Swachhta Hi Seva) ಕಾರ್ಯಕ್ರಮದ ಭಾಗವಾಗಿ ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಎಂಬ ಅಭಿಯಾನದಲ್ಲಿ ಜನರು ಜನಪ್ರತಿನಿಧಿಗಳು, ರಾಜಕೀಯ ನಾಯಕರು, ಹಲವು ಸಂಘಟನೆಗಳು ಹಾಗೂ ಜನರು ಸ್ವಯಂಪ್ರೇರಿತರಾಗಿ ಭಾಗಿಯಾಗಿದ್ದಾರೆ‘ ಎಂದು ವಸತಿ ಸಚಿವಾಲಯ ತಿಳಿಸಿದೆ.

‘ಒಂದು ಕಾರ್ಯಕ್ರಮಕ್ಕಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಭಾಗಿಯಾಗಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ಸ್ವಚ್ಛ ಭಾರತ್‌ ಮಿಷನ್‌ 2.0 ಕಾರ್ಯಕ್ರಮದಡಿ 2026ರ ಒಳಗೆ ಕಸರಹಿತ ನಗರಗಳನ್ನು ಮಾಡುವ ಗುರಿ ಹೊಂದಿದ್ದು, ಅಕ್ಟೋಬರ್ 1ರಂದು ನಡೆದ ಅಭಿಯಾನವು ಸ್ಫೂರ್ತಿ ನೀಡಿದೆ‘ ಎಂದು ಸಚಿವಾಲಯ ಹೇಳಿದೆ.

ಇತ್ತೀಚೆಗೆ ನಡೆದ ಮನ್‌ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ಸ್ವಚ್ಛತೆಗಾಗಿ ದೊಡ್ಡ ಕಾರ್ಯಕ್ರಮವೊಂದು ಭಾನುವಾರ (ಅ.1ರಂದು) ನಡೆಯಲಿದೆ. ನೀವು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ನೀವು ನಿಮ್ಮ ಬೀದಿಗಳಲ್ಲಿ, ನೆರೆಹೊರೆಯಲ್ಲಿ, ಉದ್ಯಾನದಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.