ADVERTISEMENT

ಜುಬೈರ್ ಬೆಂಬಲಿಸಿದ ಟ್ವಿಟರ್ ಖಾತೆಗಳ ಮೂಲ ಪಾಕಿಸ್ತಾನ: ದೆಹಲಿ ಪೊಲೀಸ್

ಐಎಎನ್ಎಸ್
Published 12 ಜುಲೈ 2022, 6:47 IST
Last Updated 12 ಜುಲೈ 2022, 6:47 IST
ಮೊಹಮ್ಮದ್ ಜುಬೈರ್
ಮೊಹಮ್ಮದ್ ಜುಬೈರ್   

ನವದೆಹಲಿ: ಪತ್ರಕರ್ತ ಮೊಹಮ್ಮದ್ ಜುಬೈರ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ಹೆಚ್ಚಿನ ಟ್ವಿಟರ್ ಖಾತೆಗಳು ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ಮೂಲದ್ದಾಗಿವೆ ಎಂಬುದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ ಜುಬೈರ್‌ಗೆ ಬೆಂಬಲಿಸುವ ಬಹುತೇಕ ಟ್ವೀಟ್‌ಗಳು ಪಾಕಿಸ್ತಾನ, ಯುಎಇ, ಬಹ್ರೇನ್, ಕುವೈತ್ ದೇಶಗಳಿಂದ ಬಂದಿವೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2018ರಲ್ಲಿ ಪೋಸ್ಟ್ ಮಾಡಿದ ಆಕ್ಷೇಪಾರ್ಹ ಟ್ವೀಟ್, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ 'ಆಲ್ಟ್ ನ್ಯೂಸ್' ಸಹ ಸಂಸ್ಥಾಪಕ ಜುಬೈರ್ ಅವರನ್ನು ದೆಹಲಿ ಪೊಲೀಸ್ ಬಂಧಿಸಿತ್ತು.

33 ವರ್ಷದ ಜುಬೈರ್ ಅವರನ್ನು ಬೆಂಗಳೂರಿನ ಮನೆಗೆ ಕರೆತಂದು ಪೊಲೀಸರು ಶೋಧ ನಡೆಸಿದ್ದರು.

ಜುಬೈರ್ ಟ್ವೀಟ್ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅವರ ಅನುಯಾಯಿಗಳ ಸಂಖ್ಯೆ ವರ್ಧಿಸಿತು. ಈ ಸಂಬಂಧ ಸರಣಿ ಚರ್ಚೆ ಹಾಗೂ ದ್ವೇಷವನ್ನು ಹುಟ್ಟು ಹಾಕಿದೆ ಎಂಬ ಆರೋಪ ದಾಖಲಾಗಿದೆ. #IsupportZubair ಎಂಬ ಹ್ಯಾಶ್‌ಟ್ಯಾಗ್ ಕೂಡಾ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.