ಭುವನೇಶ್ವರ:ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ನಾಗಾಲ್ಯಾಂಡ್ ನೋಂದಣಿ ಸಂಖ್ಯೆಯ ಟ್ರಕ್ ಒಂದಕ್ಕೆ ₹ 6.53 ಲಕ್ಷ ದಂಡ ವಿಧಿಸಲಾಗಿದೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಿರುವುದು ಆಗಸ್ಟ್10 ರಂದು. ಆದರೆ,ಮೋಟಾರು ವಾಹನ(ತಿದ್ದುಪಡಿ) ಮಸೂದೆ ಜಾರಿಗೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
NL 08, D 7079 ನೋಂದಣಿ ಸಂಖ್ಯೆಯ ಟ್ರಕ್ ಚಾಲಕ ದಿಲೀಪ್ ಕಟ್ರಾ ಹಾಗೂ ಮಾಲೀಕ ಶೈಲೇಶ್ ಶಂಕರ್‌ಲಾಲ್ ಗುಪ್ತಾ ಎನ್ನುವವರಿಗೆಸಂಬಲ್‌ಪುರ ಆರ್‌ಟಿಒ ದಂಡ ಪಾವತಿ ಸಂಬಂಧ ಚಲನ್‌ನೀಡಿದೆ. 2014ರ ಜುಲೈ 21ರಿಂದ 2019ರ ಸೆಪ್ಟೆಂಬರ್ 30ರ ವರೆಗೆ(ಐದು ವರ್ಷಗಳ ಕಾಲ) ರಸ್ತೆ ತೆರಿಗೆ ಕಟ್ಟದ ಕಾರಣ ಟ್ರಕ್ ಮಾಲೀಕಶೈಲೇಶ್‌ಗೆ ಒಡಿಶಾ ಮೋಟಾರು ವಾಹನ ತೆರಿಗೆ ಕಾಯ್ದೆ ಅಡಿಯಲ್ಲಿ ₹ 6.40 ಲಕ್ಷ ದಂಡ ಹಾಕಲಾಗಿದೆ.
ಶಬ್ದ,ವಾಯು ಮಾಲಿನ್ಯ ತಪಾಸಣಾ ಪತ್ರ,ವಾಹನ ವಿಮೆ ಇಲ್ಲದೆ ಸಂಚಾರ, ಸರಕು ಸಾಗಾಣೆ ವಾಹನದಲ್ಲಿ ಜನರ ಸಾಗಾಣೆ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೂ ದಂಡ ವಿಧಿಸಲಾಗಿದೆ.
ಚಲನ್‌ನಲ್ಲಿರುವಂತೆ, ರಸ್ತೆ ತೆರಿಗೆ ಹೊರತಾಗಿ ಶಬ್ದ, ವಾಯು ಮಾಲಿನ್ಯಕ್ಕಾಗಿ ₹ 1000, ಜನರನ್ನು ಸಾಗಿಸಿದ್ದಕ್ಕಾಗಿ ₹ 5000, ಅನುಮತಿ ಪತ್ರವಿಲ್ಲದೆ ವಾಹನ ಸಂಚಾರ ಮಾಡಿದ್ದಕ್ಕಾಗಿ ₹ 5000, ವಿಮೆ ಇಲ್ಲದಿರುವುದಕ್ಕೆ ₹ 1000, ಸಂಚಾರಿ ನಿಯಮ ಉಲ್ಲಂಘನೆಗೆ ₹ 500, ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ₹ 500 ಹಾಗೂ ಸಾಧಾರಣ ಅಪರಾಧಗಳಿಗಾಗಿ ₹ 100 ದಂಡ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.