ಭೋಪಾಲ್: ಮದುವೆಯಾಗುವ ಮೂಲಕ ಅಥವಾ ವಂಚಿಸಿ ಮತಾಂತರಕ್ಕೆ ಯತ್ನಿಸುವುದನ್ನು ತಡೆಯಲು ರೂಪಿಸಿರುವ ಧಾರ್ಮಿಕ ಸ್ವಾತಂತ್ರ್ಯ ಮಸೂದೆ–2020ಕ್ಕೆ ಮಧ್ಯಪ್ರದೇಶ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ.
ಈ ಮಸೂದೆ ಕಾಯ್ದೆ ರೂಪದಲ್ಲಿ ಜಾರಿಯಾದರೆ, ಅಪರಾಧಿಗೆ 10 ವರ್ಷ ಜೈಲು ಹಾಗೂ ₹ 1ಲಕ್ಷ ದಂಡ ವಿಧಿಸಬಹುದಾಗಿದೆ.
‘ಈ ಮಸೂದೆಯನ್ನು ಶೀಘ್ರವೇ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಕಾನೂನು ರೂಪಪಡೆದು ಜಾರಿಗೊಂಡ ನಂತರ, ಮದುವೆಯಾಗಿ ಅಥವಾ ವಂಚಿಸಿ ಇಲ್ಲವೇ ಬೆದರಿಕೆವೊಡ್ಡುವ ಮೂಲಕ ಮತಾಂತರಗೊಳಿಸುವುದರ ವಿರುದ್ಧ ದೇಶದಲ್ಲಿಯೇ ಅತ್ಯಂತ ಕಠಿಣ ಕಾನೂನು ಇದಾಗಲಿದೆ‘ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದರು.
‘ಕೇವಲ ಮತಾಂತರ ಉದ್ದೇಶದಿಂದ ಆಗುವ ಮದುವೆ ಅಸಿಂಧು ಎಂಬುದಾಗಿ ಘೋಷಿಸಲು ಈ ಉದ್ದೇಶಿತ ಕಾನೂನಿನಲ್ಲಿ ಅವಕಾಶ ಇದೆ. ಮತಾಂತರಗೊಳ್ಳಲು ಇಚ್ಛಿಸುವವರು, ಎರಡು ತಿಂಗಳು ಮುಂಚಿತವಾಗಿ ಜಿಲ್ಲಾ ಆಡಳಿತಕ್ಕೆ ಅರ್ಜಿ ಸಲ್ಲಿಸಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.