ADVERTISEMENT

ಆದಾಯಕ್ಕಿಂತ ಅಧಿಕ ಆಸ್ತಿ: ಶೋಧ ಕಾರ್ಯಾಚರಣೆ ವೇಳೆ ಫಿನಾಯಿಲ್ ಕುಡಿದ ಸರ್ಕಾರಿ ನೌಕರ

ಮಧ್ಯ ಪ್ರದೇಶ ಕ್ಲರ್ಕ್ ಮನೆಯಲ್ಲಿ ಶೋಧ: ₹85 ಲಕ್ಷ ಪತ್ತೆ

ಪಿಟಿಐ
Published 4 ಆಗಸ್ಟ್ 2022, 4:31 IST
Last Updated 4 ಆಗಸ್ಟ್ 2022, 4:31 IST
   

ಭೋಪಾಲ್: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಪ್ರಕರಣವೊಂದರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಮಧ್ಯಪ್ರದೇಶದ ಸರ್ಕಾರಿ ನೌಕರರೊಬ್ಬರ ಮನೆಯಲ್ಲಿ ₹85 ಲಕ್ಷ ಪತ್ತೆಯಾಗಿದೆ.

ಬುಧವಾರ ಅಧಿಕಾರಿಗಳು ಕ್ಲರ್ಕ್ ಮನೆಗೆ ಶೋಧಕ್ಕೆ ತೆರಳಿದ್ದ ವೇಳೆ ಆತ ವಿಷ ಕುಡಿದಿರುವುದಾಗಿ ಹೇಳಲಾಗಿದೆ.

ಕ್ಲರ್ಕ್ ಹೀರೊ ಕೆಸ್ವಾನಿ ತಿಂಗಳಿಗೆ ₹50,000 ವೇತನ ಪಡೆಯುತ್ತಿದ್ದಾರೆ. ಮನೆಯಲ್ಲಿ ಶೋಧ ನಡೆಸುವಾಗ, ಕೋಟಿ ಮೌಲ್ಯದ ಆಸ್ತಿಯ ದಾಖಲೆ ಪತ್ರಗಳು ಕೂಡ ಲಭ್ಯವಾಗಿದೆ.

ADVERTISEMENT

ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದರು. ವಿಚಾರಣೆ ವೇಳೆ ಮನೆಯಲ್ಲಿ ಶೋಧ ನಡೆಸುವಾಗ ಕ್ಲರ್ಕ್, ಫಿನಾಯಿಲ್ ಸೇವಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದಕ್ಕೂ ಮುನ್ನ ಕ್ಲರ್ಕ್ ಕೆಸ್ವಾನಿ, ಮನೆಯಲ್ಲಿ ಶೋಧ ನಡೆಸದಂತೆ ಅಧಿಕಾರಿಗಳಿಗೆ ತಡೆ ಒಡ್ಡಿದ್ದರು.

ಅಸ್ವಸ್ಥಗೊಂಡ ಕ್ಲರ್ಕ್‌ ಕೆಸ್ವಾನಿಯವರನ್ನು ಹಮೀದಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಸ್ವಾನಿ ಮನೆಯಲ್ಲಿ ₹1.5 ಕೋಟಿಗೂ ಅಧಿಕ ಮೌಲ್ಯದ ಅಲಂಕಾರಿಕ ಉಪಕರಣಗಳಿವೆ. ಅಲ್ಲದೆ, ಕುಟುಂಬದವರ ಬ್ಯಾಂಕ್‌ ಖಾತೆಗಳಲ್ಲಿ ಕೆಸ್ವಾನಿ ಹಣ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.