ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದು ಪಾಕಿಸ್ತಾನದ ಟೀ-ಶರ್ಟ್ ಧರಿಸಿ ಪೋಸ್ಟ್ ಹಾಕಿದ 21 ವರ್ಷದ ಯುವಕನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ (ಎನ್‌ಎಸ್‌ಎ) ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಬಜರಂಗದಳದ ಮುಖಂಡರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾಹೀಲ್ ಲಲ್ಲಾ ಎಂಬವರು ಬಂಧಿತ ಆರೋಪಿ. ದೇಶ ವಿರೋಧಿ ಘೋಷಣೆಗಳನ್ನು ಬರೆದಿದ್ದರಲ್ಲದೆ ಪಾಕಿಸ್ತಾನ ಧ್ವಜದೊಂದಿಗೆ ಟಿ -ಶರ್ಟ್ ಧರಿಸಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಟೀ-ಶರ್ಟ್‌ನಲ್ಲಿ 'ಜೋರ್ಡನ್' ಎಂಬ ಪದವನ್ನು ಬರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಸ್ಟ್ ಮಾಡಿದ ಎರಡು ತಾಸಿನೊಳಗೆ ಭಾನುವಾರ ಸಂಜೆ 7ರ ಅಸುಪಾಸಿನಲ್ಲಿ ಲಲ್ಲಾ ಅವರನ್ನು ಬಂಧಿಸಲಾಗಿದೆ ಎಂದು ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಶುಕ್ಲಾ ತಿಳಿಸಿದ್ದಾರೆ.
ಕೋಮು ಸೌಹಾರ್ದತೆಗೆ ಧಕ್ಕೆತರುವ ಯತ್ನ ಮತ್ತು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ತಂದೊಡ್ಡುವ ಆರೋಪದ ಅಡಿಯಲ್ಲೂ ಲಲ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.