ADVERTISEMENT

ಅರ್ಚಕರ ಆಕ್ಷೇಪ: ಕ್ಷಮೆ ಕೋರಿ, ಜಾಹೀರಾತು ಹಿಂಪಡೆದ ಜೊಮಾಟೊ

 ಮಹಾಕಾಳೇಶ್ವರ ದೇಗುಲದ ಅರ್ಚಕರ ವಿರೋಧ; ಮಧ್ಯಪ್ರದೇಶದ ಗೃಹ ಸಚಿವ ತನಿಖೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 14:48 IST
Last Updated 21 ಆಗಸ್ಟ್ 2022, 14:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್‌ : ಬಾಲಿವುಡ್ ನಟ ಹೃತಿಕ್ ರೋಷನ್ ನಟಿಸಿರುವ ಜೊಮಾಟೊ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯ ಜಾಹೀರಾತಿನಲ್ಲಿ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನದ ಅರ್ಚಕರು ಆಕ್ಷೇಪಿಸಿದ ಬೆನ್ನಲ್ಲೇ ಸಂಸ್ಥೆಯು ಭಾನುವಾರ ಜಾಹೀರಾತನ್ನು ಹಿಂಪಡೆದು, ಕ್ಷಮೆಯಾಚಿಸಿದೆ.

‘ಈ ಜಾಹೀರಾತಿನಲ್ಲಿ ಮಹಾಕಾಳ್‌ ರೆಸ್ಟೋರೆಂಟ್‌ ಹೆಸರು ಉಲ್ಲೇಖಿಸಲಾಗಿತ್ತು. ಯಾರೊಬ್ಬರ ಭಾವನೆ ಮತ್ತು ನಂಬಿಕೆ ಘಾಸಿಗೊಳಿಸುವ ಉದ್ದೇಶವಿಲ್ಲ. ಈ ಬಗ್ಗೆ ಕ್ಷಮೆ ಕೋರುತ್ತೇವೆ’ ಎಂದುಜೊಮಾಟೊ ಕಂಪನಿ ಟ್ವಿಟರ್‌ನಲ್ಲಿ ತಿಳಿಸಿದೆ.

ಈ ಜಾಹೀರಾತಿನಲ್ಲಿ ಹೃತಿಕ್‌ ರೋಷನ್ ‘ಉಜ್ಜಯಿನಿಯಲ್ಲಿ ಥಾಲಿ ಸವಿಯಬೇಕೆನಿಸಿತ್ತು. ಹಾಗಾಗಿ ‘ಮಹಾಕಾಳ್‌’ನಿಂದ ತರಿಸಿಕೊಂಡೆ’ ಎಂದು ಹೇಳುವ ಸಂಭಾಷಣೆ ಇತ್ತು.

ADVERTISEMENT

ಮಹಾಕಾಳೇಶ್ವರದಲ್ಲಿ ಭಕ್ತರಿಗೆ ಅನ್ನದಾಸೋಹದಪ್ರಸಾದ ನೀಡಲಾಗುತ್ತದೆ. ದೇಗುಲದ ಅರ್ಚಕರಾದ ಮಹೇಶ್‌ ಮತ್ತು ಆಶೀಷ್‌ ಅವರು ಜೊಮಾಟೊ ಸಂಸ್ಥೆ ತಕ್ಷಣವೇ ಜಾಹೀರಾತು ಹಿಂಪಡೆದು, ಕ್ಷಮೆಯಾಚಿಸುವಂತೆ ಶನಿವಾರ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.