ADVERTISEMENT

ಪಾಕಿಸ್ತಾನ ಮಹಿಳೆಗಾಗಿ ಸುನಂದ ಪುಷ್ಕರ್, ಶಶಿತರೂರ್ ನಡುವೆ ನಿತ್ಯ ಜಗಳವಿತ್ತು

ಸುನಂದ ಪುಷ್ಕರ್ ಸಾವಿನ ಪ್ರಕರಣ-ನ್ಯಾಯಾಲಯಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಹಿತಿ

ಏಜೆನ್ಸೀಸ್
Published 31 ಆಗಸ್ಟ್ 2019, 13:10 IST
Last Updated 31 ಆಗಸ್ಟ್ 2019, 13:10 IST
   

ನವದೆಹಲಿ: ಪಾಕಿಸ್ತಾನಿ ಪತ್ರಕರ್ತೆ ವಿಷಯವಾಗಿಸುನಂದ ಪುಷ್ಕರ್ ಹಾಗೂ ಪತಿ ಶಶಿತರೂರ್ ನಡುವೆ ಪ್ರತಿನಿತ್ಯಜಗಳ ನಡೆಯುತ್ತಿತ್ತು. ಈ ಜಗಳದುಬೈನಲ್ಲಿಯೂ ನಡೆದಿತ್ತು, ಈ ಘಟನೆಗೆ ಅವರ ಮನೆಯಲ್ಲಿದ್ದ ಸೇವಕ ಸಾಕ್ಷಿ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜಗಳ ಯಾವ ಮಟ್ಟದಲ್ಲಿ ನಡೆಯುತ್ತಿತ್ತು ಎಂದರೆ, ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿತ್ತು,ಒಂದು ಬಾರಿ ಸುನಂದ ಅವರು ಶಶಿತರೂರ್ ಅವರ ಮೇಲೂ ಹಲ್ಲೆ ನಡೆಸಿದ್ದರು. ಪರಸ್ಪರ ಜಗಳ ಪ್ರತಿ ನಿತ್ಯ ನಡೆಯುತ್ತಿತ್ತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ಶನಿವಾರ ಸುನಂದ ಪುಷ್ಕರ್ ಸಾವಿನ ಪ್ರಕರಣ ಸಂಬಂಧ ಸಂಸದ ಶಶಿತರೂರ್ ವಿರುದ್ಧ ಕೊಲೆ ಪ್ರಕರಣ ಅಥವಾ ಆತ್ಮಹತ್ಯೆಗೆ ಪ್ರೇರಣೆ ಇವೆರಡರಲ್ಲಿ ಯಾವುದರ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಬೇಕು ಎಂದು ನ್ಯಾಯಾಲಯದ ಅನುಮತಿ ಕೋರಿದ್ದಾರೆ.

ADVERTISEMENT

ಈ ಸಂದರ್ಭನ್ಯಾಯಾಲಯಕ್ಕೆ ಪ್ರಕರಣದ ಹಿನ್ನೆಲೆಯಮಾಹಿತಿ ನೀಡಿದ ಸರ್ಕಾರಿ ಪರ ವಕೀಲರು, ದುಬೈನಿಂದ ವಾಪಸಾದ ನಂತರ ಪಾಕಿಸ್ತಾನಿ ಪತ್ರಕರ್ತೆಯ ವಿಷಯಕ್ಕಾಗಿ ಜಗಳ ನಡೆದಿತ್ತು. ಐಪಿಎಲ್ ಗೆ ಸಂಬಂಧಿಸಿದಂತೆ ಸುನಂದ ಪತ್ರಿಕಾಗೋಷ್ಟಿ ನಡೆಸಿದ್ದರು. ಇದಾದ ನಂತರ ಅವರು ಸಾವನ್ನಪ್ಪಿದ್ದರು.ಅಲ್ಲದೆ, ಸುನಂದ ಅವರಿಗೆ ಪ್ರಾಣಕ್ಕೆ ಕುತ್ತು ತರುವ ಇಂಜೆಕ್ಷನ್ ಚುಚ್ಚಿರುವ ಗುಮಾನಿಯಿದೆ ಎಂದು ಅಭಿಯೋಜಕರು ಹೇಳಿದ್ದಾರೆ.

ಸುನಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು

ಸುನಂದ ಪುಷ್ಕರ್ ಅವರ ಇ-ಮೇಲ್‌ಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ ಒಂದು ಮೇಲ್ ನಲ್ಲಿ ಪುಷ್ಕರ್ ಮಾನಸಿಕವಾಗಿ ತೀವ್ರ ಆಘಾತಅನುಭವಿಸುತ್ತಿರುವುದನ್ನು ಅವರೇ ಹೇಳಿಕೊಂಡಿದ್ದಾರೆ. ತಾನು ಬದುಕಿರಲು ಸಾಧ್ಯವಿಲ್ಲ. ತಾನು ಸಾಯುವುದಾಗಿ ಹೇಳಿಕೊಂಡಿದ್ದಾರೆ. ಪುಷ್ಕರ್ ತನ್ನ ಸ್ನೇಹಿತೆಯೊಂದಿಗೂ ತನ್ನ ನೋವುಗಳನ್ನು ಹಂಚಿಕೊಂಡಿದ್ದಾರೆ.

ಪತ್ರಕರ್ತೆ ನಳಿನಿಸಿಂಗ್ ಅವರ ಹೇಳಿಕೆ ಪ್ರಕಾರ, ಸಾಯುವ ರಾತ್ರಿ ಸ್ವಲ್ಪ ಸಮಯದ ಹಿಂದೆಮಾತನಾಡಿದ್ದರು. ಅವರ ಧ್ವನಿ ಕ್ಷೀಣಿಸಿತ್ತು. ಆ ಧ್ವನಿಯಲ್ಲಿಯೇ ತರೂರ್ ನನಗೆ ವಿಚ್ಛೇದನ ನೀಡಿ ಮೆಹರ್ ತರಾರ್ ವಿವಾಹವಾಗುತ್ತಾರಂತೆ ಎಂದು ನೋವಿನಿಂದ ಹೇಳಿಕೊಂಡರುಎಂದು ತಿಳಿಸಿದ್ದಾರೆ.

ಸಂಸದ ಶಶಿತರೂರ್ ಅವರ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ತರೂರ್ ಪರವಕೀಲ ವಿಕಾಸ್ ಪಹ್ವಾ, ಸರ್ಕಾರಿ ಅಭಿಯೋಜಕರ ಆರೋಪಗಳು ಸುಳ್ಳು, ಈ ಘಟನೆಗೆ ಸಂಬಂಧಿಸಿದಂತೆ ತಜ್ಞರು ನೀಡಿರುವ ವರದಿಯನ್ನು ಓದಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.