ಮೊರೆನಾ: ದೆಹಲಿಯಿಂದ ಭೋಪಾಲ್‌ಗೆ ಹೊರಟಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಒಂಟೆಗೆ ಡಿಕ್ಕಿ ಹೊಡೆದುದರಿಂದ ಒಂಟೆಯ ದೇಹದ ಭಾಗಗಳು ಎಂಜಿನ್‌ಗೆ ಸಿಲುಕಿಕೊಂಡು ರೈಲು ಎರಡು ಗಂಟೆ ನಿಲುಗಡೆಯಾದ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ರಾಣಿ ಕಮಲಾಪತಿ ರೈಲು ನಿಲ್ದಾಣದ ಬಳಿ ಶನಿವಾರ ನಡೆದಿದೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಒಂಟೆಯು ಚೂರು-ಚೂರಾಗಿದ್ದು, ಅದರ ದೇಹದ ಭಾಗಗಳು ರೈಲಿನ ಎಂಜಿನ್‌ನಲ್ಲಿ ಸಿಲುಕಿಕೊಂಡಿದ್ದರಿಂದಲೇ ರೈಲು ಸ್ಥಗಿತಗೊಳ್ಳುವಂತಾಯಿತು. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಎಂಜಿನ್‌ನಲ್ಲಿ ಸಿಲುಕಿದ್ದ ಒಂಟೆಯ ಭಾಗಗಳನ್ನು ತೆರವುಗೊಳಿಸಿದ ಬಳಿಕ ರೈಲು ಅಲ್ಲಿಂದ ತೆರಳಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.