ಭೋಪಾಲ್: ಕಮಲ್‌ನಾಥ್ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ಆರು ಮಂದಿ ಸಚಿವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪೀಕರ್ ಎನ್.ಪಿ. ಪ್ರಜಾಪತಿಶನಿವಾರ ತಿಳಿಸಿದ್ದಾರೆ.
‘ಸಚಿವರ ರಾಜೀನಾಮೆ ಪತ್ರವು ಪರಿಶೀಲನೆಗೆ ನನ್ನ ಮುಂದೆ ಬಂದಾಗ, ಶುಕ್ರವಾರ ಅಥವಾ ಶನಿವಾರ ನನ್ನ ಮುಂದೆ ಹಾಜರಾಗುವಂತೆ ಸಚಿವರಿಗೆ ಸೂಚಿಸಿದ್ದೆ. ಆದರೆ ಯಾರೂ ಬಂದಿಲ್ಲ. ಆರು ಮಂದಿ ಸಚಿವರ ರಾಜೀನಾಮೆಯನ್ನು ನಾನು ಅಂಗೀಕರಿಸಿದ್ದೇನೆ’ ಎಂದು ಸ್ಪೀಕರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡೆದ್ದು, ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದ ಈ ಸಚಿವರನ್ನು ಮುಖ್ಯಮಂತ್ರಿ ಕಮಲ್‌ನಾಥ್ ಅವರು ಕೆಲವು ದಿನಗಳ ಹಿಂದೆಯೇ ಸಂಪುಟದಿಂದ ವಜಾಗೊಳಿಸಿದ್ದರು.
ಆರು ಮಂದಿಯ ರಾಜೀನಾಮೆ ಅಂಗೀಕರಿಸಿದ್ದರಿಂದ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯಬಲವು 222ಕ್ಕೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.