ADVERTISEMENT

ಮಧ್ಯಪ್ರದೇಶದಲ್ಲಿ ಪಾದ ನೆಕ್ಕಿದ ವ್ಯಕ್ತಿ: ಇಬ್ಬರ ಬಂಧನ

ಪಿಟಿಐ
Published 8 ಜುಲೈ 2023, 13:46 IST
Last Updated 8 ಜುಲೈ 2023, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗ್ವಾಲಿಯರ್‌: ಮಧ್ಯಪ್ರದೇಶದ ಸೀದೀ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನೊಬ್ಬನ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣ ನಡೆದಿರುವಾಗಲೇ, ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಪಾದ ನೆಕ್ಕುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 

ಗ್ವಾಲಿಯರ್‌ನಲ್ಲಿ ಚಲಿಸುತ್ತಿದ್ದ ವಾಹನವೊಂದರಲ್ಲಿ ಈ ಘಟನೆ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತ ಮತ್ತು ಆರೋಪಿ ಇಬ್ಬರೂ ಗ್ವಾಲಿಯರ್‌ ಜಿಲ್ಲೆಯ ಡಬರಾ ಪಟ್ಟಣಕ್ಕೆ ಸೇರಿದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯು ಸಂತ್ರಸ್ತನ ಕಪಾಳಕ್ಕೆ ಹಲವು ಬಾರಿ ಹೊಡೆಯುವ, ‘ಗೋಲು ಗುರ್ಜರ್‌ ಬಾಪ್‌ ಹೈ’ ಎಂದು ಹೇಳುವಂತೆ ಬಲವಂತ ಮಾಡುವ, ಪಾದ ನೆಕ್ಕಿಸಿಕೊಳ್ಳುವ ಮತ್ತು ಆತನಿಗೆ ಅವಾಚ್ಯ ಪದಗಳಿಂದ ನಿಂದಿಸುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಮತ್ತೊಂದು ವಿಡಿಯೊದಲ್ಲಿ, ಸಂತ್ರಸ್ತನಿಗೆ ಆರೋಪಿಯು ಚಪ್ಪಲಿಯಿಂದ ಥಳಿಸುವ ದೃಶ್ಯ ಇದೆ. 

ADVERTISEMENT

‘ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಹರಿದಾಡಿದ್ದ ವಿಡಿಯೊವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿತ್ತು. ಸಂತ್ರಸ್ತನ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.