ಲಖನೌ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹11 ಲಕ್ಷ ದೇಣಿಗೆ ನೀಡಿದ್ದಾರೆ.
ನಾನಿದನ್ನು ಸ್ವ ಇಚ್ಛೆಯಿಂದ ನೀಡಿದ್ದೇನೆ. ನನ್ನ ಕುಟುಂಬ ಮಾಡಿದ್ದಕ್ಕೆ ನಾನು ಜವಾಬ್ದಾರಿಯಾಗಲಾರೆ. ಹಿಂದಿನದ್ದು ಎಂದಿಗೂ ಭವಿಷ್ಯಕ್ಕೆ ಸಮನಾಗಿರುವುದಿಲ್ಲ ಎಂದು ಅಪರ್ಣಾ ಹೇಳಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.
ರಾಮನಲ್ಲಿ ನಮಗೆ ನಂಬಿಕೆ ಹಾಗೂ ಗೌರವ ಇದೆ. ಹೀಗಾಗಿ ಸ್ವಯಂಪ್ರೇರಿತವಾಗಿ ನಾನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹11 ಲಕ್ಷ ದೇಣಿಗೆ ನೀಡಿದ್ದೇನೆ. ರಾಮ ಭಾರತದ ಗುಣಲಕ್ಷಣ, ಮೌಲ್ಯಗಳು ಹಾಗೂ ನಂಬಿಕೆಯ ಕೇಂದ್ರ ಬಿಂದು. ಪ್ರತಿಯೊಬ್ಬ ಭಾರತೀಯನೂ ದೇಣಿಗೆ ನೀಡಬೇಕು ಎಂದು ನಾನು ಭಾವಿಸುತ್ತೇನೆ. ನಾನೂ ದೇಣಿಗೆ ನೀಡಿದ್ದೇನೆ ಎಂದು ಅಪರ್ಣಾ ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.