ADVERTISEMENT

ಮುಂಬೈ | ರೀಲ್ಸ್ ಮಾಡಲು ಹೋಗಿ 300 ಅಡಿ ಆಳದ ಕಮರಿಗೆ ಬಿದ್ದು ಯುವತಿ ದಾರುಣ ಸಾವು

ಪಿಟಿಐ
Published 18 ಜುಲೈ 2024, 3:09 IST
Last Updated 18 ಜುಲೈ 2024, 3:09 IST
<div class="paragraphs"><p> ಅನ್ವಿ ಕಾಮ್ದಾರ್‌</p></div>

ಅನ್ವಿ ಕಾಮ್ದಾರ್‌

   

ಇನ್‌ಸ್ಟಾಗ್ರಾಮ್

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ ಅನ್ವಿ ಕಾಮ್ದಾರ್‌, ರೀಲ್ಸ್ ವಿಡಿಯೊ ಚಿತ್ರೀಕರಿಸಲು ಹೋಗಿ 300 ಅಡಿ ಆಳವಾದ ಕಮರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಮ್ಮ ಸೇಹ್ನಿತರೊಂದಿಗೆ ಮಹಾರಾಷ್ಟ್ರದ ರಾಯಗಢದ ಮಂಗಾಂವ್‌ನ ಪ್ರಸಿದ್ಧ ಕುಂಭೆ ಜಲಪಾತಕ್ಕೆ ಅನ್ವಿ ಭೇಟಿ ನೀಡಿದ್ದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುವ ವೇಳೆ ಆಳವಾದ ಕಮರಿಗೆ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಅನ್ವಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂಬೈನ ಮುಲುಂಡ್‌ ನಿವಾಸಿ ಅನ್ವಿ ಕಾಮ್ದಾರ್, ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿದ್ದರು.

ಪ್ರವಾಸ ಕ್ಷಣಗಳನ್ನು ಸೆರೆ ಹಿಡಿಯುವ ಹಾಗೂ ಅಲ್ಲಿನ ವಿಶೇಷ ಸ್ಥಳಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿದ್ದ ಅನ್ವಿ, 2.5 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು. ಇವರ ವಿಡಿಯೊಗಳಿಗೆ ಮಿಲಿಯನ್‌ಗಟ್ಟಲೆ ವೀವ್ಸ್‌ ಸಹ ಬಂದಿದೆ.

ಟ್ರಾವಲ್‌ ಬ್ಲಾಗರ್‌ ಆಗಿದ್ದ ಅನ್ವಿ, ಪ್ರೇಕ್ಷಣೀಯ ಸ್ಥಳಗಳಿಗೆ ಹೇಗೆ ತಲುಪಬೇಕು ಎಂಬುವುದರ ಕುರಿತು ಮಾಹಿತಿ ಒದಗಿಸುತ್ತಿದ್ದರು. ತಾವು ಭೇಟಿ ನೀಡಿದ ಪ್ರವಾಸದ ಅನುಭವಗಳನ್ನೂ ವಿಡಿಯೊ ಮೂಲಕ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.