ADVERTISEMENT

ಪಾಕ್, ಚೀನಾದಲ್ಲಿ ತರಬೇತಿ ಪಡೆದ ಅಪಾಯಕಾರಿ ವ್ಯಕ್ತಿ ಮುಂಬೈ ಪ್ರವೇಶ: ಹೈಅಲರ್ಟ್‌

ಪಿಟಿಐ
Published 28 ಫೆಬ್ರುವರಿ 2023, 11:07 IST
Last Updated 28 ಫೆಬ್ರುವರಿ 2023, 11:07 IST
   

ಮುಂಬೈ: ಪಾಕಿಸ್ತಾನ, ಚೀನಾದಲ್ಲಿ ತರಬೇತಿ ಪಡೆದ ಅಪಾಯಕಾರಿ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಂಕಿತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಮುಂಬೈನಲ್ಲಿ ಅಪಾಯಕಾರಿ ವ್ಯಕ್ತಿಯ ಚಲನವಲನ ಕಂಡು ಬಂದಿದೆ ಎಂದು ಎನ್‌ಐಎಯಿಂದ ಪೊಲೀಸರಿಗೆ ಭಾನುವಾರ ಇ–ಮೇಲ್‌ ಸಂದೇಶ ಬಂದಿದೆ. ಹೀಗಾಗಿ ಎಲ್ಲೆಡೆ ಅಲರ್ಟ್‌ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಬೈ ಪ್ರವೇಶಿಸಿರುವ ಶಂಕಿತ ಅಪಾಯಕಾರಿ ವ್ಯಕ್ತಿಯನ್ನು ಮಧ್ಯಪ್ರದೇಶದ ಸರ್ಫರಾಜ್ ಮೆಮನ್ ಎಂದು ಎನ್‌ಐಎ ಹೇಳಿದೆ. ಮುಂಬೈ ಜತೆಗೇ, ಮಧ್ಯಪ್ರದೇಶದ ಪೊಲೀಸರಿಗೂ ಎನ್‌ಐಎ ಎಚ್ಚರಿಕೆ ಸಂದೇಶ ಕಳುಹಿಸಿದೆ.

ADVERTISEMENT

ಶಂಕಿತನ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್‌ಪೋರ್ಟ್‌ನಂತಹ ವಿವರಗಳನ್ನು ಎನ್‌ಐಎ ಹಂಚಿಕೊಂಡಿದೆ. ಈತ ಚೀನಾ, ಹಾಂಗ್ ಕಾಂಗ್ ಮತ್ತು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾನೆ ಎಂದು ತಿಳಿಸಲಾಗಿದೆ.

ಎನ್‌ಐಎಯಿಂದ ಇ–ಮೇಲ್‌ ಬಂದಿರುವುದು, ಶಂಕಿತನಿಗಾಗಿ ಹುಡುಕಾಟ ನಡೆದಿರುವುದನ್ನು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.