ADVERTISEMENT

600 ಕೆ.ಜಿ.ಗೂ ಅಧಿಕ ಮಾದಕವಸ್ತು, 1 ಕೋಟಿ ಸಿಗರೇಟ್‌ ನಾಶಪಡಿಸಿದ ಮುಂಬೈ ಕಸ್ಟಮ್ಸ್

ಪಿಟಿಐ
Published 23 ಫೆಬ್ರುವರಿ 2022, 13:05 IST
Last Updated 23 ಫೆಬ್ರುವರಿ 2022, 13:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಕಸ್ಟಮ್ಸ್ ಅಧಿಕಾರಿಗಳು ಮುಂಬೈನಲ್ಲಿ ವಿವಿಧ ಕಾರ್ಯಾಚರಣೆಯ ಸಂದರ್ಭ ವಶಪಡಿಸಿಕೊಂಡಿದ್ದ ₹500 ಕೋಟಿ ಮೌಲ್ಯದ 600 ಕೆ.ಜಿ.ಗೂ ಅಧಿಕ ಮಾದಕವಸ್ತು ಮತ್ತು ಒಂದು ಕೋಟಿಗೂ ಅಧಿಕ ವಿದೇಶಿ ಸಿಗರೇಟ್‌ಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ನವಿ ಮುಂಬೈ ಸಮೀಪದ ತಲೋಜಾ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಮಾದಕವಸ್ತು ಮತ್ತು ಸಿಗರೇಟ್ ನಾಶಪಡಿಸಲಾಗಿದೆ.

ವಶಪಡಿಸಿಕೊಂಡಿದ್ದ ಮಾದಕವಸ್ತು ಪೈಕಿ 293 ಕೆ.ಜಿ. ಹೆರಾಯಿನ್ ಮತ್ತು 50 ಕೆ.ಜಿ. ಮೆಫಿಡ್ರೋನ್ ಕೂಡ ಇದ್ದು, ಮಾರುಕಟ್ಟೆಯಲ್ಲಿ ₹500 ಕೋಟಿ ಮೌಲ್ಯ ಹೊಂದಿದೆ ಎಂದು ಕಸ್ಟಮ್ಸ್ ಅಧಿಕಾರಿ ರಾಜೇಶ್ ಸನನ್ ತಿಳಿಸಿದ್ದಾರೆ.

ADVERTISEMENT

ಜತೆಗೆ ಸುಮಾರು ₹15 ಕೋಟಿ ಮೌಲ್ಯದ, 19 ಮೆಟ್ರಿಕ್ ಟನ್ ತೂಕವಿದ್ದ 1 ಕೋಟಿ ಸಿಗರೇಟ್‌ಗಳನ್ನು ಕೂಡ ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.