ADVERTISEMENT

ಮುಂಬೈ | ₹20 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ: ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 13:39 IST
Last Updated 25 ಮಾರ್ಚ್ 2024, 13:39 IST
ಮಹಿಳೆಯು ಸಾಗಿಸುತ್ತಿದ್ದ ಮಾದಕವಸ್ತು
ಮಹಿಳೆಯು ಸಾಗಿಸುತ್ತಿದ್ದ ಮಾದಕವಸ್ತು   

ಮುಂಬೈ: ₹20 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಸಿಯೆರಾ ಲಿಯೋನಿ ಮೂಲದ ಮಹಿಳಾ ಪ್ರಯಾಣಿಕರೊಬ್ಬರನ್ನು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಬಂಧಿಸಿದೆ.

ಮಹಿಳೆಯು ತಂದಿದ್ದ ಲಗೇಜುಗಳನ್ನು ಪರಿಶೀಲಿಸಿದಾಗ  ಶೂ, ಮಾಯಿಶ್ಚರೈಜರ್‌ ಬಾಟಲಿ, ಶಾಫು ಬಾಟಲಿಗಳಲ್ಲಿ ಕೊಕೇನ್‌  ಪತ್ತೆಯಾಗಿದೆ. ಒಟ್ಟು, 1,979 ಗ್ರಾಂ ತೂಕದ ಅಂದಾಜು ₹19.79 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದು, ಮಹಿಳೆಯನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT