ADVERTISEMENT

ವರ್ಸೋವಾ ಕಡಲ ಕಿನಾರೆಯತ್ತ ನಿಸರ್ಗ ಚಂಡಮಾರುತ: ಎಲ್ಲೆಡೆ ಹೈ ಅಲರ್ಟ್

ಏಜೆನ್ಸೀಸ್
Published 3 ಜೂನ್ 2020, 10:04 IST
Last Updated 3 ಜೂನ್ 2020, 10:04 IST
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಜನರನ್ನು  ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವುದು
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವುದು   

ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ಕಡಲ ತೀರದತ್ತ ಧಾವಿಸಿದೆ. ಇಲ್ಲಿ ಬಿರುಸಿನ ಗಾಳಿ ಬೀಸುತ್ತಿದ್ದು ರತ್ನಗಿರಿ ಪ್ರದೇಶದಲ್ಲಿ ಮಳೆಯಾಗಿದೆ. ರತ್ನಗಿರಿಯಲ್ಲಿ ಬುಧವಾರ ಬೆಳಗ್ಗೆ 9.30ರ ಹೊತ್ತಿಗೆ ಪ್ರತಿ ಗಂಟೆಗೆ59 ಕಿಮೀ ವೇಗದಲ್ಲಿ ಗಾಳಿಬೀಸಿದೆ. ಇದು ಮತ್ತಷ್ಟು ತೀವ್ರತೆ ಪಡೆದು ಉತ್ತರ ಕೊಂಕಣ ತೀರಕ್ಕೆ ಸಾಗಿದೆ.

ಮುಂಬೈಯ ವರ್ಸೋವಾ ಕಡಲ ಕಿನಾರೆಯಲ್ಲಿ ರಭಸದಿಂದ ಗಾಳಿ ಬೀಸಿ ತೀವ್ರ ಸ್ವರೂಪ ಪಡೆದಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ನಿಸರ್ಗ ಚಂಡಮಾರುತವು ಮಧ್ಯಾಹ್ನ 1- 3ಗಂಟೆಯ ನಡುವೆ ಅಲೀಭಾಗ್ (ರಾಯ್‌ಗಢ) ಮೂಲಕ ಹಾದುಹೋಗಲಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಬೃಹನ್ಮುಂಬೈ ನಗರ ಪಾಲಿಕೆ ಜಂಟಿಯಾಗಿ ವರ್ಸೋವಾ ಕಡಲ ತೀರ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.