ADVERTISEMENT

ಪರಮ್‌ ವೀರ್‌ ಸಿಂಗ್‌ ಪ್ರಕರಣ: ಹವಾಲಾ ದಂಧೆಕೋರ ಬಂಧನ

ಪಿಟಿಐ
Published 21 ಅಕ್ಟೋಬರ್ 2021, 7:08 IST
Last Updated 21 ಅಕ್ಟೋಬರ್ 2021, 7:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ವೀರ್‌ ಸಿಂಗ್‌ ವಿರುದ್ಧ ದಾಖಲಾದ ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಗುಜರಾತ್‌ನಲ್ಲಿ ಹವಾಲಾ ದಂಧೆಕೋರಅಲ್ಪೇಶ್‌ ಪಟೇಲ್‌ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಉದ್ಯಮಿ ಬಿಮಲ್‌ ಅಗರ್‌ವಾಲ್‌ ಅವರು ಪರಮ್‌ ವೀರ್‌ ಸಿಂಗ್‌ ವಿರುದ್ಧ ಗೋರೆಗಾಂವ್‌ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿದ್ದರು. ಇದರ ತನಿಖೆ ವೇಳೆ ಪಟೇಲ್‌ ಪಾತ್ರವು ಬೆಳಕಿಗೆ ಬಂದಿದೆ ಎಂದು ಅಧಿಕಾರಿ ಹೇಳಿದರು.

ಮುಂಬೈ ಪೊಲೀಸರು ಪಟೇಲ್‌ಗಾಗಿ ಶೋಧ ಆರಂಭಿಸಿದರು. ಮೆಹ್ಸಾನಾದಲ್ಲಿ ದೊರೆತ ಮಾಹಿತಿಯನ್ನಾಧರಿಸಿ ಅಲ್ಲಿಗೆ ತೆರಳಿದ ಪೊಲೀಸ್‌ ತಂಡವು ಪಟೇಲ್ ಅವರನ್ನು ಬಂಧಿಸಿತು.ಆರೋಪಿಯನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಶುಕ್ರವಾರದವರೆಗೆ ಆತನನ್ನು ಪೊಲೀಸ್‌ ವಶಕ್ಕೆ ನೀಡಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.