ADVERTISEMENT

ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳ ಹೆಸರು ಬಹಿರಂಗಪಡಿಸಿದ ಪೊಲೀಸರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2024, 9:20 IST
Last Updated 13 ಅಕ್ಟೋಬರ್ 2024, 9:20 IST
<div class="paragraphs"><p>ಸಿದ್ಧಿಕಿ ಹತ್ಯೆ ಸ್ಥಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಂಡ</p></div>

ಸಿದ್ಧಿಕಿ ಹತ್ಯೆ ಸ್ಥಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಂಡ

   

ಪಿಟಿಐ ಚಿತ್ರ

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಹೆಸರನ್ನೂ ಈಗ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ADVERTISEMENT

ಎಎನ್‌ಐ ಜೊತೆ ಪೊಲೀಸರು ಹಂಚಿಕೊಂಡಿರುವ ಪ್ರಕಟಣೆಯಲ್ಲಿ, ಹರಿಯಾಣದ ಗುರ್ಮೈಲ್ ಸಿಂಗ್ ಮತ್ತು ಉತ್ತರ ಪ್ರದೇಶ ಧರ್ಮರಾಜ್ ಕಶ್ಯಪ್ ಬಂಧಿತರು ಎಂದು ತಿಳಿಸಲಾಗಿದೆ.

ವಿಚಾರಣೆ ವೇಳೆ ಬಂಧಿತರು, ಒಂದೆರಡು ತಿಂಗಳುಗಳಿಂದ ಮುಂಬೈನಲ್ಲಿ ಇರುವುದಾಗಿ ಹೇಳಿದ್ದಾರೆ. ಅಲ್ಲದೆ, ಸಿದ್ಧಿಕ್ ಮನೆ ಮತ್ತು ಕಚೇರಿಯ ಸುತ್ತಲಿನ ಪರಿಸರದ ಮಾಹಿತಿ ಕಲೆ ಹಾಕಿದ್ದಾಗಿಯೂ ಹೇಳಿದ್ದಾರೆ.

‘ಮುಂಬೈ ಅಪರಾಧ ದಳದ ಹಲವು ತಂಡಗಳು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಮೂರನೇ ಆರೋಪಿಯ ಪತ್ತೆಗೆ ಶೋಧ ಮುಂದುವರಿಸಲಾಗಿದೆ’ಎಂದು ಪ್ರಕಟಣೆ ತಿಳಿಸಿದೆ.

ಮಾಜಿ ಮಂತ್ರಿಯಾಗಿರುವ ಸಿದ್ಧಿಕ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ಕಚೇರಿಯ ಪ್ರಕಟಣೆ ತಿಳಿಸಿದೆ.

ಶನಿವಾರ ರಾತ್ರಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಸಿದ್ಧಿಕಿಗೆ ಗುಂಡಿಕ್ಕಿ ಕೊಂದಿದ್ದರು.

ಆಸ್ಪತ್ರೆಯಲ್ಲಿ ಪರೀಕ್ಷೆ ಬಳಿಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.