ADVERTISEMENT

ಮುಂಬೈ: ₹245 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ

ಪಿಟಿಐ
Published 27 ಮಾರ್ಚ್ 2024, 16:15 IST
Last Updated 27 ಮಾರ್ಚ್ 2024, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ದ್ರಾಕ್ಷಿ ತೋಟದ ನಡುವಿದ್ದ ಮೆಫೆಡ್ರೋನ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು ₹245 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಫೆಡ್ರೋನ್‌ ತಯಾರಕ ಪ್ರವೀಣ್‌ ಶಿಂದೆ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಕಳೆದ ತಿಂಗಳು ₹7 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದ ನಂತರ ತನಿಖೆ ವೇಳೆ ಈ ವಿಚಾರ ಬಯಲಿಗೆ ಬಂದಿತ್ತು.

ಮುಂಬೈ ಕ್ರೈಂ ವಿಭಾಗದ ಪೊಲೀಸರು ಸೋಮವಾರ ತೋಟದ ಮೇಲೆ ದಾಳಿ ನಡೆಸಿ 122.5 ಕೆ.ಜಿ ಮೆಫೆಡ್ರೋನ್‌ ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

ADVERTISEMENT

ಆಪ್ತ ವಲಯದಲ್ಲಿ ‘ಡಾಕ್ಟರ್‌’ ಎಂದೇ ಕರೆಯುವ ಶಿಂದೆ (34) ಪ್ರಕರಣ ಪ್ರಮುಖ ಆರೋಪಿ. ಸಾಂಗ್ಲಿ ಜಿಲ್ಲೆಯ ಈತ ಬೆಳೆದಿದ್ದು ಮುಂಬೈ ಹೊರವಲಯದ ಮೀರಾ ರೋಡ್‌ನಲ್ಲಿ. ಈತ ಓದಿದ್ದು 10ನೇ ತರಗತಿಯಾದರೂ ಡಗ್ಸ್‌ ತಯಾರಿಕೆಯಲ್ಲಿ ಪರಿಣತಿ ಪಡೆದಿದ್ದಾನೆ. ಸಾಂಗ್ಲಿಯಲ್ಲಿ ಮೆಫೆಡ್ರೋನ್‌ ತಯಾರಿಕೆಗೂ ಮೊದಲು ಉತ್ತರ ಪ್ರದೇಶದಲ್ಲಿ ತರಬೇತಿ ಪಡೆದಿದ್ದಾನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.