ADVERTISEMENT

ಮಹಾರಾಷ್ಟ್ರ: 29 ವರ್ಷಗಳ ಬಳಿಕ ಕೊಲೆ ಆರೋಪಿ ಬಂಧನ

ಪಿಟಿಐ
Published 3 ಏಪ್ರಿಲ್ 2024, 13:43 IST
Last Updated 3 ಏಪ್ರಿಲ್ 2024, 13:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಾಲ್ಘರ್‌: ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಹೋದ್ಯೋಗಿಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸುಮಾರು 29 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಆರೋಪಿ ಹರೇಶ್ ಬಾಬು ಪಟೇಲ್‌ ಅಲಿಯಾಸ್‌ ನಾಯಕ್‌(55) ಮತ್ತು ಕೊಲೆಯಾದ ಮೋಹನ್‌ ಸುಕೂರ್‌ ದುಬ್ಲಿ(50), ಪಾಲ್ಘರ್‌ ಸಮೀಪ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಯಾವುದೋ ಕಾರಣಕ್ಕೆ ಇಬ್ಬರು ನಡುವೆ ವೈಮನಸ್ಸು ಉಂಟಾಗಿತ್ತು. 1995ರ ಎಪ್ರಿಲ್ 19ರಂದು ಹರೇಶ್, ಸಹೋದ್ಯೋಗಿ ಮೋಹನ್‌ನನ್ನು ಗುದ್ದಲಿಯಿಂದ ಹೊಡೆದು ಕೊಂದಿದ್ದ’ ಎಂದು ಪಾಲ್ಘರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಾಲಸಾಹೇಬ್‌ ಪಾಟೀಲ್‌ ತಿಳಿಸಿದ್ದಾರೆ.

ADVERTISEMENT

‘ಘಟನೆ ನಡೆದು ಎರಡು ದಿನಗಳ ಬಳಿಕ ಪೊಲೀಸರು ಆರೋಪಿ ಹರೇಶ್‌ನನ್ನು ಬಂಧಿಸಿದ್ದರು. ಆದರೆ, ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆರೋಪಿಯು ಸ್ವಗ್ರಾಮದಲ್ಲಿ ಇರುವ ಬಗ್ಗೆ 29 ವರ್ಷಗಳ ಬಳಿಕ ದೊರೆತ ಮಾಹಿತಿಯ ಆಧಾರದಲ್ಲಿ ವಿಶೇಷ ತನಿಖಾ ತಂಡವು ಮಂಗಳವಾರ ಆತನನ್ನು ಬಂಧಿಸಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಸಫಾಲೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.