ADVERTISEMENT

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮುಷರಫ್ ಪ್ರಾಮಾಣಿಕ ಯತ್ನ: ಮೆಹಬೂಬಾ

ಪಿಟಿಐ
Published 5 ಫೆಬ್ರುವರಿ 2023, 12:59 IST
Last Updated 5 ಫೆಬ್ರುವರಿ 2023, 12:59 IST
 ಪರ್ವೇಜ್ ಮುಷರಫ್‌
ಪರ್ವೇಜ್ ಮುಷರಫ್‌   

ಶ್ರೀನಗರ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಜನರಲ್‌ ಪರ್ವೇಜ್ ಮುಷರಫ್‌ ಅವರ ನಿಧನಕ್ಕೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸಂತಾಪ ಸೂಚಿಸಿದ್ದಾರೆ.

ಮುಷರಫ್ ಅವರು ಕಾಶ್ಮೀರದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದ ಪಾಕಿಸ್ತಾನದ ಏಕ ಮಾತ್ರ ಜನರಲ್ ಎಂದು ಮೆಹಬೂಬಾ ನೆನಪಿಸಿಕೊಂಡಿದ್ದಾರೆ.

79 ವರ್ಷದ ಮುಷರಫ್, ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ADVERTISEMENT

ಮುಷರಫ್ ಬಹುಶಃ ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ ಏಕೈಕ ಪಾಕಿಸ್ತಾನದ ಜನರಲ್ ಆಗಿದ್ದಾರೆ. ಅವರು ಭಾರತ-ಪಾಕಿಸ್ತಾನದ ಸ್ವೀಕಾರದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಬೇಡಿಕೆಗೆ ಅನುಗುಣವಾಗಿ ಪರಿಹಾರವನ್ನು ಬಯಸಿದ್ದರು ಎಂದು ಹೇಳಿದರು.

ಮುಷರಫ್ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಡುವಣ ಕದನ ವಿರಾಮ ಒಪ್ಪಂದವೂ ಈಗಲೂ ನೆಲೆನಿಂತಿದೆ ಎಂದು ಅವರು ಹೇಳಿದರು.

2001ರಿಂದ 2008ರವರೆಗೆ ಮುಷರಫ್ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. 1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ವೇಳೆ ಮುಷರಫ್ ಅವರೇ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.