ಮುಂಬೈ: ನಾಸಿಕ್ ಜಿಲ್ಲೆಯಲ್ಲಿ ಗೋ ಕಳ್ಳಸಾಗಣೆ ಆರೋಪದ ಮೇಲೆ ಯುವಕನೊಬ್ಬನನ್ನು ‘ಗೋರಕ್ಷಕರ’ ಗುಂಪು ಥಳಿಸಿ ಕೊಂದಿದೆ.
ನಾಸಿಕ್‌ನ ಇಗತ್‌ಪುರಿಯ ಗಿರಿಧಾಮದಲ್ಲಿ ಈ ಕೃತ್ಯ ನಡೆದಿದ್ದು, ಮೃತನನ್ನು ಠಾಣೆ ಜಿಲ್ಲೆಯ ಪಡ್ಗಾ ನಿವಾಸಿ ಲುಕ್ಮಾನ್ ಸುಲೇಮಾನ್ ಅನ್ಸಾರಿ ಎಂದು ಗುರುತಿಸಲಾಗಿದೆ.
ಪೊಲೀಸರು ಚೇತನ್ ಸೋನವಾನೆ, ಪ್ರದೀಪ್ ಅಧೋಲೆ, ಭಾಸ್ಕರ್ ಭಗತ್, ಶೇಖರ್ ಗಾಯಕ್ವಾಡ್, ವಿಜಯ್ ಭಾಗ್ಡೆ ಮತ್ತು ರೂಪೇಶ್ ಜೋಶಿ ಎಂಬುವರನ್ನು ಬಂಧಿಸಿದ್ದಾರೆ.
ಜೂನ್ 8 ರಂದು ಲುಕ್ಮಾನ್ ತನ್ನ ಸ್ನೇಹಿತರಾದ ಅತೀಕ್ ಪಡ್ಡಿ ಮತ್ತು ಅಕ್ವೀಲ್ ಗವಂಡಿ ಅವರೊಂದಿಗೆ ಶಹಾಪುರದ ರೈತ ಮಹಿಳೆಯಿಂದ ಸುಮಾರು ₹ 18,000ಕ್ಕೆ ಒಂದು ಎತ್ತು, ಎರಡು ಹಸುಗಳು ಮತ್ತು ಒಂದು ಕರುವನ್ನು ಖರೀದಿಸಿದ್ದರು. ಟೆಂಪೊದಲ್ಲಿ ಅವುಗಳನ್ನು ಸಾಗಿಸುತ್ತಿದ್ದ ವೇಳೆ ಶಹಪುರದ ವಿಹಿಗಾಂವ್‌ನಲ್ಲಿ ಗೋರಕ್ಷಕರ ಗುಂಪು ಅವರನ್ನು ತಡೆದಿದೆ.
ನಂತರ ಅವರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಥಳಿಸಿದ್ದರು. ಲುಕ್ಮಾನ್ ತೀವ್ರವಾಗಿ ಗಾಯಗೊಂಡರು. ಇಬ್ಬರು ಸ್ನೇಹಿತರು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು.
ಲುಕ್ಮಾನ್ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಆರೋಪಿಗಳು ತಿಳಿಸಿದ್ದಾರೆ. ಆದರೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜೂನ್ 10 ರಂದು ಕಮರಿಯಲ್ಲಿ ಅವರ ಶವ ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.