ADVERTISEMENT

ಗಣತಿಯೇ ಆಗದೆ ಹಿಂದೂ–ಮುಸ್ಲಿಮರ ಪ್ರಮಾಣ ನಿರ್ಧರಿಸಿದ್ದು ಹೇಗೆ?: ತೇಜಸ್ವಿ ಯಾದವ್

ಪ್ರಜಾವಾಣಿ ವಿಶೇಷ
Published 9 ಮೇ 2024, 13:34 IST
Last Updated 9 ಮೇ 2024, 13:34 IST

‘ಪ್ರಧಾನಮಂತ್ರಿಯವರಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯು ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ ಎಂದು ವರದಿ ನೀಡಿದ್ದನ್ನು ಬಿಜೆಪಿಯು ಚರ್ಚೆಯ ವಿಷಯವನ್ನಾಗಿಸಿದೆ. ಆದರೆ, ದೇಶದಲ್ಲಿ 2011ರ ನಂತರ, ಜನಗಣತಿಯೇ ಆಗಿಲ್ಲ. ಗಣತಿಯೇ ಆಗದೆ ದೇಶದಲ್ಲಿ ಹಿಂದೂ–ಮುಸ್ಲಿಮರ ಜನಸಂಖ್ಯೆ ಬಗ್ಗೆ ಕೇಂದ್ರ ಸರ್ಕಾರ ಹೇಗೆ ತನ್ನ ನಿರ್ಧಾರ ಪ್ರಕಟಿಸುತ್ತೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ. ‘ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂಬ ವರದಿ ನೀಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಈ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.