ಗೊಂಡಾ (ಉತ್ತರಪ್ರದೇಶ): ಪ್ರಧಾನಿ ಮೋದಿ ಅವರ ವರ್ಚಸ್ಸಿನಿಂದ ಪ್ರಭಾವಿತರಾದ ಮುಸ್ಲಿಂ ಮಹಿಳೆಯೊಬ್ಬರು ತನ್ನ ನವಜಾತ ಶಿಶುವಿಗೆ ‘ನರೇಂದ್ರ ದಾಮೋದರದಾಸ್ ಮೋದಿ’ ಎಂದು ನಾಮಕರಣ ಮಾಡಿದ್ದಾರೆ.
ಇಲ್ಲಿನ ಪರ್ಸಾಪುರ್ ಮಹ್ರೌರ್ ಗ್ರಾಮದ ಮೈನಾಜ್ ಬೇಗಂ ತನ್ನ ಮಗುವಿಗೆ ಈ ಹೆಸರಿಟ್ಟಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದದಿನವೇ ಮೈನಾಜ್ ಅವರು ಮಗುವಿಗೆ ಮೋದಿಯ ಹೆಸರಿಡಲು ತೀರ್ಮಾನಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಟುಂಬದವರು ಅವರ ಮನವೊಲಿಸಲು ಯತ್ನಿಸಿದ್ದರೂ, ಮೈನಾಜ್ ನಿರ್ಧಾರ ಬದಲಿಸಲಿಲ್ಲ ಎಂದು ಮಹಿಳೆಯ ಮಾವ ಇದ್ರಿಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.