ADVERTISEMENT

ಮಹಿಳೆಯರಿಂದಲೇ ಮೊದಲ ಬಾರಿಗೆ ಹಜ್‌ ಯಾತ್ರೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 17:07 IST
Last Updated 30 ಜೂನ್ 2018, 17:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ : 45 ವರ್ಷ ಮೇಲ್ಪಟ್ಟ 1,308 ಭಾರತೀಯ ಮಹಿಳೆಯರು ಇದೇ ಮೊದಲ ಬಾರಿ ಪುರುಷ ಜೊತೆಗಾರರಿಲ್ಲದೇ ಹಜ್‌ ಯಾತ್ರೆ ಕೈಗೊಂಡಿದ್ದಾರೆ.

‘ಭಾರತದ ಮಹಿಳೆಯರು ಹಜ್‌ ಯಾತ್ರೆಗೆ ತೆರಳುವ ವೇಳೆ ಪುರುಷರ ಸಂಗಡ (ಮೆಹ್ರಂ) ತೆರಳಬೇಕಿತ್ತು, ಈ ಬಾರಿ 1308 ಮಹಿಳೆಯರು ತಾವೇ ಯಾತ್ರೆ ಕೈಗೊಂಡಿದ್ದಾರೆ’ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಕ್ವಿ ತಿಳಿಸಿದರು.

‘ಈ ಬಾರಿ ದೇಶದಿಂದ 1,75,025 ಮಂದಿ ಹಜ್‌ ಯಾತ್ರೆಗೆ ಹೋಗುತ್ತಿದ್ದು, ಇದರಲ್ಲಿ ಶೇ. 47ರಷ್ಟು ಮಹಿಳೆಯರು ಇದ್ದಾರೆ ಎಂದು ನಕ್ವಿ ತಿಳಿಸಿದರು.

ADVERTISEMENT

ಕಳೆದ ವರ್ಷದ ತನಕ ಹಜ್‌ ಯಾತ್ರೆ ತೆರಳುವ ಮಹಿಳೆಯರು ಪುರುಷರ (ತಂದೆ,ಸಹೋದರ,ಮಗ) ಜೊತೆ ತೆರಳಬೇಕಿತ್ತು.

ಈ ವಿಚಾರದ ಕುರಿತಂತೆ 2017ರ ಅಕ್ಟೋಬರ್‌ನಲ್ಲಿ ಸಂಸದೀಯ ವ್ಯವಹಾರಗಳ ನಿವೃತ್ತ ಕಾರ್ಯದರ್ಶಿ ಅಫ್ಜಲ್‌ ಅಮನುಲ್ಲಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದ ಸಮಿತಿಯೂ, 45 ವರ್ಷ ಮೇಲ್ಪಟ್ಟ ಮಹಿಳೆಯರು‍ಪುರುಷರಿಲ್ಲದೇ ಯಾತ್ರೆಗೆ ತೆರಳಲು ಅನುಮತಿ ನೀಡಬಹುದು ಎಂದು ತಿಳಿಸಿತ್ತು. ಸಮಿತಿ ಶಿಫಾರಸ್ಸಿನಂತೆ ಸರ್ಕಾರ ಮಹಿಳೆಯರಿಗೆ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.